ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಅವರ ಭಾವ ಸಮಗ್ರ-3 ಸಂಪುಟಗಳು-_ ಈ ಕೃತಿಯು ಶೀರ್ಷಿಕೆಯೇ ಸೂಚಿಸುವಂತೆ ಮೂರು ಕೃತಿಗಳನ್ನು ಒಳಗೊಂಡಿದೆ. `ಭಾವ‘ವು ಈ ಲೇಖಕರ ಆತ್ಮಕಥವಲ್ಲ, ಮಾಸ್ತಿಯವರ ಜನನ - ಬಾಲ್ಯ - ಕೌಮರ-ಯೌವನ, ಭಾರತವರ್ಷದ ಸ್ವಾತಂತ್ರ್ಯ ಸಂಗ್ರಾಮದ ಮುನ್ನಡೆ, ಅದಕ್ಕಾಗಿ ಹೋರಾಡಿದ ಧುರೀಣರ ಭಾಷಣಗಳು ಇತ್ಯಾದಿ ಅವರು ಸಾಕ್ಷಿಯಾಗಿದ್ದವರು. ಪೌಢ ವಿದ್ಯಾರ್ಥಿ ದಿನಗಳಲ್ಲಿ. ವೃತ್ತಿಜೀವನವು ಕ್ರಮಿಸಿದ್ದು ರಾಜರ ಆಳ್ವಿಕೆಯಲ್ಲಿಯೇ. ಶ್ರೀನಿವಾಸ‘ರ ಸಾಹಿತ್ಯ ಕೃಷಿ ನಡೆದದ್ದು ಕನ್ನಡ ಭಾಷೆಯ ಬೆಳವಣಿಗೆ-ಹೋರಾಟಕ್ಕೂ ಇವರು ಸಾಕ್ಷಿ. ಸಾಹಿತ್ಯ ಪರಿಷತ್ತಿನ ಕೆಲಸ, ಕರ್ನಾಟಕ ಏಕೀಕರಣ ಸಂದರ್ಭದ ಕರ್ತವ್ಯ ನಿರ್ವಹಣೆ- ಈ ಎಲ್ಲವುಗಳ ನಡುವೆ ಸ್ವಾತಂತ್ರ ಭಾರತ ಉದಯ, ನಾಡ ವೈಜ್ಞಾನಿಕ - ಕೈಗಾರಿಕ ಕ್ಷೇತ್ರಗಳಲ್ಲಿನ ಮುನ್ನಡೆ, ಭಾಷಾವಿವಾದ ಈ ಎಲ್ಲವನ್ನೂ ಮಾಸ್ತಿ ಕಂಡಿದ್ದಾರೆ. ಹೀಗಾಗಿ, ಇಂತಹ ಸನ್ನಿವೇಶಗಳ ಸಾಕ್ಷಿಯೂ ಆಗಿದ್ದಾರೆ.
©2024 Book Brahma Private Limited.