ನಮ್ಮ ಕನಸಿನ ಕರ್ನಾಟಕ ಏನಾಯಿತು?

Author : ಕೋ. ಚೆನ್ನಬಸಪ್ಪ

Pages 78

₹ 60.00




Published by: ಶ್ರೀ ಅರವಿಂದ ಪ್ರಕಾಶನ
Phone: 26757159

Synopsys

ಈ ಕೃತಿ ಕನ್ನಡ ನಾಡಿನ ರಾಜಕೀಯ, ಸಾಮಾಜಿಕ ಬೆಳವಣಿಗೆಗಳನ್ನು, ವರ್ತಮಾನದ ಕೆಲವು ದುರಂತಗಳನ್ನು ಕಂಡು ಅದನ್ನು ನೊಂದು ದಾಖಲಿಸಿರುವ ಒಡಲಾಳದ ಧ್ವನಿ. ಬಾಳ ಸಂಜೆಯಲ್ಲಿರುವ ಕೋಚೆಯವರು ದೇಶದ ಸ್ವಾತಂತ್ರಕ್ಕಾಗಿ, ಕರ್ನಾಟಕದ ಏಕೀಕರಣಕ್ಕಾಗಿ ದುಡಿದವರು. ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವವರು. ನಾಡು ನುಡಿಗಾಗಿ ಹೋರಾಡಿದವರು. ಈ ಕಾರಣಕ್ಕಾಗಿಯೇ ಕರ್ನಾಟಕದ ಕುರಿತಂತೆ ಅವರ ಮಾತುಗಳಿಗೆ ವಿಶೇಷ ತೂಕವಿದೆ. ಈ ಕೃತಿಯಲ್ಲಿ ಅನುಸರಿಸಿದ ರಚನಾತಂತ್ರ ವೈಶಿಷ್ಟಪೂರ್ಣವಾಗಿದೆ. ಮುಖ್ಯವಾಗಿ ಪತ್ರರೂಪದಲ್ಲಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಸರಕಾರಗಳಿಗೆ, ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಬರೆದಿರುವ ಪತ್ರಗಳು ಇಲ್ಲಿವೆ. ವರ್ತಮಾನದ ಕರ್ನಾಟಕದ ದುರಂತಗಳನ್ನು ಬೆಟ್ಟು ಮಾಡುತ್ತಾ, ಹೇಗೆ ಇದನ್ನು ಸರಿಪಡಿಸಬಹುದು ಎನ್ನುವುದರ ಕುರಿತಂತೆ ಅವರು ಮಾರ್ಗದರ್ಶನಗಳನ್ನು ನೀಡುವ ಪ್ರಯತ್ನವನ್ನೂ ಮಾಡುತ್ತಾರೆ. ಪತ್ರ ಖಾಸಗಿಯಾದುದು. ಅದನ್ನು ಕದ್ದು ಓದಬಾರದು ಎನ್ನುವ ನಿಯಮವಿದೆ. ಆದರೆ ಈ ಪತ್ರ ಸಾರ್ವತ್ರಿಕವಾದುದು. ಒಂದು ನಿರ್ದಿಷ್ಟ ವಿಷಯವನ್ನಿಟ್ಟು ಬರೆದ ಪತ್ರಗಳೂ ಬೇರೆ ಬೇರೆ ಆಯಾಮಗಳ ಮೂಲಕ ಓದುಗರನ್ನು ತಟ್ಟುತ್ತದೆ. ಅದರ ಹಿಂದಿರುವ ಕನ್ನಡದ ಕುರಿತ ಕಳಕಳಿ ದೊಡ್ಡದು. ಆದುದರಿಂದ ಕೆಲವು ಪತ್ರಗಳೂ ನಮ್ಮಿಳಗೆ ಹಿರಿದಾದ ಚಿಂತನೆಯನ್ನು ಬಿತ್ತುತ್ತವೆ.

About the Author

ಕೋ. ಚೆನ್ನಬಸಪ್ಪ
(27 February 1922 - 23 February 2019)

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...

READ MORE

Related Books