ಕನ್ನಡ ನಾಡು-ನುಡಿ ಹಿತಚಿಂತಕ ಆರ್. ನರಸಿಂಹಾಚಾರ್ಯ ಅವರ ನೀತಿ ಮಂಜರಿ-ಭಾಗ -1 ಪ್ರಸ್ತುತ ಕೃತಿಯು 3ನೇ ಮುದ್ರಣವಾಗಿದೆ. 1896 ರಲ್ಲಿ ಪ್ರಥಮ ಹಾಗೂ 1898ರಲ್ಲಿ ದ್ವಿತೀಯ ಮುದ್ರಣ ಕಂಡಿತ್ತು. ಗದ್ಯಗ್ರಂಥವೂ ಹೇಗಾದರೂ ಇರಲಿ; ಪದ್ಯ ಗ್ರಂಥವು ಲಕ್ಷಣಬದ್ಧವಾಗಿರಬೇಕು ಎಂಬ ಅಭಿಪ್ರಾಯದಿಂದಲೂ, ಸಾಧ್ಯವಾದ ಮಟ್ಟಿಗೆ ಹಳೆಗನ್ನಡದ ಪದ್ಯಗಳು, ಶೈಲಿಯು, ವ್ಯಾಕರಣ ಮರ್ಯಾದೆಯಿಂದಲೂ ಶುದ್ಧವಾಗಿರಬೇಕು ಎಂಬ ಎಚ್ಚರವಹಿಸಲಾಗಿದೆ ಎಂದು ಲೇಖಕರು ಹೇಳಿದ್ದಾರೆ. ಕ್ಲಿಷ್ಟ ಪದಗಳಿಗೂ ಸವಿಸ್ತಾರವಾದ ಅರ್ಥಗಳನ್ನು ನೀಡಿದ್ದು, ಓದು ಸುಲಭವಾಗುವಂತೆ ಮಾಡಲಾಗಿದೆ.
ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು. ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ...
READ MORE