ಕರ್ನಾಟಕದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಹೀಗೆ ಈ ಮೂರು ಅಂಶಗಳು ಕನ್ನಡಿಗರಿಂದ ದೂರವಾಗುತ್ತಿವೆ. ಭಾಷೆಯು ಇಲ್ಲವಾದರೆ ಆ ಭಾಷೆಯನ್ನು ಆಡುವ ಜನರೂ ಐಕ್ಯತೆ ಇಲ್ಲದೇ ಬರುವ ಸಮಸ್ಯೆಗಳನ್ನು ಎದುರಿಸಲಾರರು. ಕೊನೆಗೆ, ಬೇರೊಂದು ಜನಾಂಗದ ದಾಳಿಯನ್ನು ಎದುರಿಸಬೇಕಾಗುತ್ತದೆ. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ. ಹೀಗೆ ಸರಣಿ ರೂಪದ ಈ ಭಾಷಾ ಬಂಧದ ಬಿಗಿಯನ್ನು ಉಳಿಸಿಕೊಳ್ಳಬೇಕು. ಕನ್ನಡಿಗರು ಕನ್ನಡತನದ ಮರೆವು ಸರಿಯಲ್ಲ. ಕನ್ನಡತನವನ್ನು ಬಿಟ್ಟುಕೊಡಲಾರದ ಕೆಚ್ಚು ಕನ್ನಡವನ್ನು ಉಳಿಸಿ ಬೆಳೆಸುತ್ತದೆ. ಇಂತಹ ಸಂಗತಿ-ಅಂಶಗಳನ್ನು ಒಳಗೊಂಡ ಕೃತಿ ಇದು.
©2025 Book Brahma Private Limited.