‘ಹಾವೇರಿ ಜಿಲ್ಲಾ ಸಾಧಕರ ಮಾಲೆ- 10’ ಕೃತಿಯು ಚಿದಾನಂದ ಎಸ್. ಮಠದ, ಮಲ್ಲಪ್ಪ ಫ. ಕರೇಣ್ಣನವರ, ವಿಶ್ವನಾಥ ಬೊಂದಾಡೆ, ಗೂಳಪ್ಪ ಅರಳೀಕಟ್ಟಿ ಅವರ ಲೇಖನಸಂಕಲನವಾಗಿದೆ. ಜಿ.ಬಿ. ಶಂಕರರಾವ್, ಡಾ. ಮಹಾದೇವ ಬಣಕಾರ, ಸಿ.ಎಂ. ಉದಾಸಿ, ಕರುಣಾಮಯಿ ಖಾದರಲಿಂಗ ಅವರ ಬದುಕಿನ ಚಿತ್ರಣ ಇಲ್ಲಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.