‘ಹಂಪಿ’ ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ರಾಜಧಾನಿ ಎಸ್. ಶ್ರೀನಿವಾಸಾಚಾರ್ ಅವರ ಕೃತಿಯಾಗಿದೆ. ಹಂಪಿಯ ನಕ್ಷೆಗಳು, ಆಗಿನ ಹಂಪಿ ಪೇಟೆಯ ದೃಶ್ಯ, ವಿಜಯನಗರ ಸಾಮ್ರಾಜ್ಯ, ಹಂಪಿಯ ಅವಶೇಷಗಳ ಕುರಿತ ವಿಷಯಗಳನ್ನು ಈ ಕೃತಿಯಿಂದ ತಿಳಿಯ ಬುದಾಗಿದೆ. ಬೃಹತ್ ಸ್ಮಾರಕವಾದ ಹಂಪಿಯ ನೈಸರ್ಗಿಕ ಪರಿಸರವೇ ಒಂದು ಅಪರೂಪ ದೃಶ್ಯ. ಇಲ್ಲಿಯ ಧಾರ್ಮಿಕ ಮತ್ತು ಇತರ ಕಟ್ಟಡಗಳ ಅವ ಶೇಷಗಳು ಸುಮಾರು ಎರಡೂವರೆ ಶತಮಾನಗಳ ಕಾಲದಲ್ಲಿ ಸೃಷ್ಟಿಸಲ್ಪಟ್ಟ ವಿಜಯನಗರ ವೈಭವದ ಲಾಂಛನ, ಮಧ್ಯಯುಗದ ಹಿಂದು ಸಂಸ್ಕೃತಿ ಯನ್ನು ನೆನಪಿಗೆ ತರುವ ಮುದ್ರಿಕೆ. ಅತ್ಯಂತ ಪ್ರೇಕ್ಷಣೀಯ ಸ್ಥಳ. ಈ ಸಚಿತ್ರ ಕೈಪಿಡಿಯು ಪ್ರವಾಸಿಗಳಿಗೆ ಉಪಯೋಗವಾಗುವುದಂತು ಖಚಿತ. ಈ ಕೃತಿಯಲ್ಲಿರುವ ಹಂಪಿಯ ಸುಂದರ ಚಿತ್ರಗಳನ್ನು ಛಾಯಾಚಿತ್ರಕಾರರಾದ ಶ್ರೀರ್ಮಾ ಟಿ. ಎಸ್. ಸತ್ಯನ್ ರವರೂ ವದಗಿಸಿದ್ದಾರೆ.
©2025 Book Brahma Private Limited.