ಕರ್ನಾಟಕ ರಾಜ್ಯದ ಕುರಿತು ಹಲವಾರು ನೆಲೆಗಳಲ್ಲಿ ಅಧ್ಯಯನಗಳು ನಡೆದಿವೆ. ಈ ಕೃತಿಯು ಕರ್ನಾಟಕವನ್ನು ಸಾಮಾಜಿಕ ಹಾಗೂ ಆರ್ಥಿಕ ನೆಲೆಯಲ್ಲಿ ಅಧ್ಯಯನದ ಮಹತ್ವದ ಅಂಶಗಳು ಈ ಕೃತಿಯಲ್ಲಿವೆ. ಬದಲಾಗುತ್ತಿರುವ ಕರ್ನಾಟಕದ ಸಾಮಾಜಿಕ ನೆಲೆಗಳಾವುವು, ಇದರ ಇತಿಹಾಸ ಏನು ಎಂಬುದನ್ನು ಇ ಕೃತಿಯಲ್ಲಿ ತಿಳಿಯಬಹುದು. ಈ ಕೃತಿಯನ್ನು ಎಸ್. ಚಂದ್ರಶೇಖರ್, ಬಿ. ಸುರೇಂದ್ರ ರಾವ್ ಹಾಗೂ ಹಂ.ಗು. ರಾಜೇಶ್ ಅವರು ಸಂಪಾದಿಸಿದ್ದಾರೆ.
ಕರ್ನಾಟಕದ ಆಧುನಿಕ ಇತಿಹಾಸ ರಚನೆಗೆ ಸಂಬಂಧಿಸಿದಂತೆ ಪ್ರಮುಖರಾದ ಎಸ್. ಚಂದ್ರಶೇಖರ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಅವರು ಸದ್ಯ ನಿವೃತ್ತರಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ...
READ MORE