‘ನಮ್ಮ ಕರ್ನಾಟಕ ಮಾಹಿತಿ ಕೋಶ’ ಸೃಷ್ಟಿ ನಾಗೇಶ್ ಸಂಗ್ರಹಿಸಿ, ಪ್ರಕಟಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ ನಮಗೆ ಗೊತ್ತಿರುವಂತಹ ಎಷ್ಟೋ ಸಂಗತಿಗಳು ಅಲ್ಲಲ್ಲಿ ಚದುರಿಹೋಗಿರುತ್ತವೆ. ಬೇಕಾದಾಗ ಅವುಗಳ್ಯಾವುದು ಬೇಗನೆ ದೊರಕುವುದಿಲ್ಲ, ಯಾರೇ ಆಗಲಿ ಮಾಹಿತಿ ದೊರೆಯದಿದ್ದಾಗ ಚಡಪಡಿಸುವುದು ಸಾಮಾನ್ಯ ಎನ್ನುತ್ತಾರೆ ಲೇಖಕ ಸೃಷ್ಟಿ ನಾಗೇಶ್. ಜೊತೆಗೆ ರಾಜ್ಯದ ಜಲ, ನೆಲ, ಆಡಳಿತ ಹಾಗೂ ಭೌಗೋಳಿಕದ ಬಗ್ಗೆ ನಮ್ಮ ಕರ್ನಾಟಕ-2011 ಕ್ಷಕಿರಣ ಬೀರಿದೆ. ಈ ಪುಸ್ತಕವು ಆಸಕ್ತಿಯಿಂದ ಓದಿದವರಿಗೆ ಅಗತ್ಯ ಮಾಹಿತಿ ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೃಷ್ಟಿನಾಗೇಶ್ ಮೂಲತಃ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದವರು. ಎಂ.ಎ ವ್ಯಸಾಂಗ ಮುಗಿಸಿ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅವರು ಆನಂತರ ಸೃಷ್ಟಿ ಪ್ರಕಾಶನದ ಮೂಲಕ ಪುಸ್ತಕ ಪ್ರಕಟಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೆ ‘ನಮ್ಮ ಕರ್ನಾಟಕ ಮಾಹಿತಿ ಕೋಶ’ ಎಂಬ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ...
READ MORE