ಈ ನೆಲದ ಸಾಂಸ್ಕೃತಿಕ ರಾಜಕಾರಣವನ್ನು ರವಿ. ರಾ. ಅಂಚನ್ ಸದಾ ಬಯಲಿಗೆಳೆಯುತ್ತಾ ಬಂದವರು. ಅವರು ಬರೆದಿರುವ ಬಹುತೇಕ ಕೃತಿಗಳಲ್ಲಿ ಕಾಣಬಹುದಾಗಿದೆ. ಬುದ್ಧ, ಅಂಬೇಡ್ಕರ್, ಫುಲೆ ಚಿಂತನೆಗಳ ಪ್ರಭಾವದಿಂದ ಬರಹಗಳು ಚಿಮ್ಮಿ ಬಂದಿವೆ. ಸುಮಾರು 28 ಲೇಖನಗಳುಳ್ಳ ಈ ಕೃತಿ, ವಿವಿಧ ವ್ಯಕ್ತಿಗಳು, ಪುಸ್ತಕಗಳು ಮತ್ತು ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು ವರ್ತಮಾನವನ್ನು ಅವರು ಚರ್ಚಿಸುತ್ತಾರೆ. ನಾರಾಯಣಗುರುಗಳು ಮತ್ತು ಅಂಬೇಡ್ಕರ್ ಅವರ ಚಳವಳಿಯನ್ನು ಅದರ ಏಳು ಬೀಳುಗಳನ್ನು ಚರ್ಚಿಸುತ್ತಾ ಮಾನವೀಯತೆಯನ್ನು ಬಿತ್ತುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳ ಕಡೆಗೆ ಬೆಳಕು ಚೆಲ್ಲುತ್ತಾರೆ. ದೇವನೂರ ಮಹಾದೇವ, ಡಾ. ಆಶಾಬೆನಕಪ್ಪ, ಡಾ. ನರೇಂದ್ರ ಕುಮಾರ್, ಬಿ. ಎಂ. ಬಶೀರ್ ಸೇರಿದಂತೆ ವಿವಿಧ ಲೇಖಕರ ಪುಸ್ತಕಗಳನ್ನು ವಿಶ್ಲೇಷಿಸುವ ಕೆಲಸಗಳನ್ನು ಮಾಡಿದ್ದಾರೆ. ಯಕ್ಷಗಾನ ಕಲೆಯನ್ನು ವಿಶ್ಲೇಷಿಸುವ ಅವರು, ಯಕ್ಷಗಾನ ಗದ್ದುಗೆಯ ಧ್ವನಿಯಿಂದ ಗದ್ದೆಯ ಧ್ವನಿಗೆ ಬದಲಾಗಬೇಕು ಎನ್ನುವ ಅಭಿಪ್ರಾಯವನ್ನು ತಾಳುತ್ತಾರೆ. ಬಸವಣ್ಣನನ್ನು ಹೇಗೆ ಮಠಗಳಲ್ಲಿ ಬಂಧಿಸಿಟ್ಟಿದ್ದಾರೆ ಎನ್ನುವುದನ್ನು ವಿಷಾದದಿಂದ ನೆನೆದು, ಆತ ಶ್ರಮಜೀವಿಗಳ ಬೆವರಿನಲ್ಲಿದ್ದಾನೆಯೇ ಹೊರತು, ಮಠಗಳಲ್ಲಿ ಇಲ್ಲ ಎಂಬುದನ್ನು ಯಾವುದೇ ಭಯವಿಲ್ಲದೆ ವಿವರಿಸುತ್ತಾರೆ.
©2024 Book Brahma Private Limited.