‘ಹಾವೇರಿ ಜಿಲ್ಲಾ ಸಾಧಕರ ಮಾಲೆರ-9’ ಕೃತಿಯು ಮಾರುತಿ ಶಿಡ್ಗಾಪೂರ, ಅರ್ಜುನ ಜೋತೆಪ್ಪನವರ, ಸಿದ್ಧಲಿಂಗೇಶ ವಳಸಂಗದ ಅವರು ಬರೆದಿರುವ ಸಾಧಕರ ಚಿತ್ರಣಕೃತಿಯಾಗಿದೆ. ಸಿಂಧೂರ ಸಿದ್ಧಪ್ಪ, ಸಂಗೂರ ಕರಿಯಪ್ಪ, ಪಂಚಾಕ್ಷರಪ್ಪ ವಳಸಂಗದ ಅವರ ಜೀವನ ಸಾಧನೆಗಳನ್ನು ಇಲ್ಲಿ ನೀಡಲಾಗಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.