“ಕುವೆಂಪು ಅವರು ಕವಿ, ಸಾಹಿತಿಯಷ್ಟೇ ಅಲ್ಲ, ಅವರು ನಾಡಿನ ಬಗ್ಗೆ, ಅದರ ಸಮಸ್ಯೆಗಳ ಬಗ್ಗೆ, ಅದರ ಭವಿಷ್ಯದ ಬಗ್ಗೆ ಸ್ಪಷ್ಟವಾದ ವಿಚಾರ ಹೊಂದಿದ್ದ ಚಿಂತಕರೂ ಹೌದು. ಅವರ ಅನೇಕ ಚಿಂತನಾ ಬರಹಗಳನ್ನು ಸಂಗ್ರಹಿಸಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹೊರ ತಂದಿರುವ ”ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನ” ಪುಸ್ತಕ ಕುವೆಂಪು ಅವರನ್ನು ಅರಿಯಲು ಒಂದು ಉಪಯುಕ್ತ ಪುಸ್ತಕವಾಗಿದೆ. ಅಲ್ಲಿನ ವಿಚಾರಗಳು ಕನ್ನಡ ಭಾಷೆಗೆ ಒಂದು ಸಂವಿಧಾನದ ಸ್ವರೂಪದಲ್ಲಿವೆ ಎಂದರೆ ತಪ್ಪಾಗದು.
©2025 Book Brahma Private Limited.