ಕರ್ನಾಟಕ ಶಿಕ್ಷಣ, ಸಾಮಾಜಿಕತೆ, ರಾಜಕೀಯ ಇತ್ಯಾದಿ ಸ್ಥಿತಿಗತಿಗಳ ಸಮಸ್ಯೆಗಳ ವಿವೇಚನೆಯೇ ಈ ಕೃತಿ-ಅಖಂಡ ಕರ್ನಾಟಕ. ಲೇಖಕ ಅ.ನ.ಕೃಷ್ಣರಾಯರು ವಿಶ್ಲೇಷಿಸಿದ್ದಾರೆ. ಲೇಖಕರು ಕನ್ನಡ ನುಡಿ ಹಾಗೂ ವಿಶ್ವವಾಣಿ ಪತ್ರಿಕೆಗಳನ್ನು ನಡೆಸುತ್ತಿದಾಗ ಕರ್ನಾಟಕದ ಸಮಗ್ರ ಸಮಸ್ಯೆ ಕುರಿತು ಬರೆಯುತ್ತಿದ್ದ ಲೇಖನಗಳ ಸಂಗ್ರಹವಿದು. ಸ್ವಾತಂತ್ಯ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರವೂ ಮಹತ್ವದ್ದು. ಕನ್ನಡಿಗರ ಸ್ಥಾನಮಾನ, ಕರ್ನಾಟಕಕ್ಕೆ ಬೇಕಾದುದೇನು? ಬೆಳಗಾಂವಿಯ ಬಾವಲಿ, ಮಂಗಳೂರಿನ ಮಾತೃಭಾಷೆ, ಮಂಗಳೂರಿನಲ್ಲಿ ಕನ್ನಡದ ಗತಿ, ಬ್ರಿಟಿಷ್ ಕರ್ನಾಟಕ ಮತ್ತು ಮೈಸೂರು, ಕರ್ನಾಟಕ ಪ್ರಾಂತ್ಯದಲ್ಲಿ ಮೈಸೂರು, ಕನ್ನಡವೂ ಆಶ್ರಿತ ಸಂಸ್ಥಾನಗಳೂ, ಕೊಡಗು ಸಮಸ್ಯೆ ಇತ್ಯಾದಿ ಒಟ್ಟು 24 ವಿದ್ವತ್ ಪೂರ್ಣ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.