‘ರಟ್ಟೀಹಳ್ಳಿ ತಾಲ್ಲೂಕು ದರ್ಶನ’ ಕೃತಿಯು ರಾಘವೇಂದ್ರ ಎಂ.ಜಿ ಹಾಗೂ ಗುಡ್ಡಚಾರಿ ಜಿ. ಕಮ್ಮಾರ ಅವರ ಸಂಕಲನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಮರುಮುದ್ರಣಗೊಂಡಿದೆ. ರಟ್ಟೀ ಹಳ್ಳಿ ತಾಲೂಕಿನ ಸಾಂಸ್ಕೃತಿಕ ನೆಲೆಗಳು, ಪಲ್ಲಟಗಳು ಹೀಗೆ ಹಲವು ಸಂಗತಿಗಳನ್ನು ಈ ಕೃತಿಯು ಬಿಂಬಿಸಿದೆ.