ರಾಷ್ಟ್ರ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಲೇಖನಗಳ ಸಂಕಲನ ʻಶ್ರವಣಬೆಳಗೊಳ: ಒಂದು ಸಮೀಕ್ಷೆʼ. ಶ್ರವಣ ಬೆಳಗೊಳ ಕರ್ನಾಟಕದ ಅತ್ಯಂತ ಪ್ರಾಚೀನವೂ, ಪ್ರಮುಖವೂ ಆದ ಒಂದು ಜೀವಂತ ಸಾಂಸ್ಕೃತಿಕ ಕೇಂದ್ರವಾಗಿದೆ. ಅದಕ್ಕಾಗಿ ಜೈನಧರ್ಮವು ಕೊಟ್ಟ ಕೊಡುಗೆ ಅಪಾರವಾದದ್ದು. ಇಂತಹ ಒಂದು ಸಾಂಸ್ಕೃತಿಕ ಕೇಂದ್ರವನ್ನು ಕುರಿತು 1981ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಇತಿಹಾಸ ವಿಭಾಗಗಳು ಏರ್ಪಡಿಸಿದ್ದ ವಿಚಾರಸಂಕಿರಣದಲ್ಲಿ ಮಂಡಿತವಾದ ಹನ್ನೊಂದು ಲೇಖನಗಳ ಸಂಗ್ರಹವಾಗಿದೆ ಪ್ರಸ್ತುತ ಕೃತಿ. ಎಂ.ಡಿ. ವಸಂತರಾಜ್ ಅವರ 'ಕರ್ನಾಟಕಕ್ಕೆ ಜೈನಧರ್ಮದ ಪ್ರವೇಶʼ, ಕೆ. ವೀರತಪ್ಪ ಅವರ ʻಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಶ್ರವಣಬೆಳ್ಗೊಳʼ, ಎಂ. ಚಿದಾನಂದ ಮೂರ್ತಿ ಅವರ ʻಶ್ರವಣಬೆಳ್ಗೊಳʼ: ಒಂದು ಸಾಂಸ್ಕೃತಿಕ ಕೇಂದ್ರವಾಗಿʼ, ಹೆಚ್.ವಿ. ಶ್ರೀನಿವಾಸ ಮೂರ್ತಿ ಅವರ ʻಕರ್ನಾಟಕದ ಕಲೆ ಮತ್ತು ಶಿಲ್ಪದಲ್ಲಿ ಬಾಹುಬಲಿʼ, ಎ. ಸುಂದರ ಅವರ ʻಶ್ರವಣಬೆಳಗೊಳದಲ್ಲಿ ಜೈನ ಬಸದಿಗಳು: ಒಂದು ಸಮೀಕ್ಷೆʼ, ಸೂರ್ಯನಾಥ ಕಾಮತ್ ಅವರ ʻಮಹಾಮಸ್ತಕಾಭಿಷೇಕ: ಐತಿಹಾಸಿಕ ಉಲ್ಲೇಖಗಳುʼ, ಬಿ.ವಿ. ಶಿರೂರ ಅವರ ʻಶ್ರವಣಬೆಳ್ಗೊಳಮತ್ತು ಕನ್ನಡ ಕವಿಗಳುʼ, ಜಿ.ಎಸ್. ಶಿವರುದ್ರಪ್ಪ ಅವರ ʻಶ್ರವಣಬೆಳುಗೊಳದ ಕನ್ನಡ ಶಾಸನಗಳಲ್ಲಿ ಕಾವ್ಯಗುಣʼ, ಪಿ.ವಿ. ನಾರಾಯಣ ಅವರ ʻಕನ್ನಡ ಕಾವ್ಯ ಪರಂಪರೆಯಲ್ಲಿ ಬಾಹುಬಲಿʼ, ಟಿ.ಕೆ. ತುಕೋಲ ಅವರ ʻಶ್ರವಣಬೆಳಗೊಳ- ಗೊಮ್ಮಟೇಶ್ವರʼ ಹಾಗೂ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ʻನಾಮಾವಳಿಯಲ್ಲಿ 'ಗಂಧವಾರಣ' ಶಬ್ದ: ಒಂದು ಟಿಪ್ಪಣಿʼ ಲೇಖನಗಳು ಇಲ್ಲಿವೆ.
©2025 Book Brahma Private Limited.