‘ಹಾವೇರಿ ಜಿಲ್ಲಾ ಸಾಧಕರ ಮಾಲೆ-6’ ಕೃತಿಯು ದುಷ್ಯಂತ ನಾಡಗೌಡ, ಜಮೀರ್ ರಿತ್ತಿ, ವಾಗೀಶ ಬ. ಹೂಗಾರ, ಎ.ಕೆ.ಆದವಾನಿಮಠ ಅವರ ಸಾಧಕರ ಚಿತ್ರಣವಾಗಿದೆ. ನಾ.ಶ್ರೀ ರಾಜಪುರೋಹಿತರು, ಶಿ.ಶಿ. ಬಸವನಾಳ ಚನ್ನಬಸಪ್ಪ ಕವಲಿ, ಚನ್ನಕ್ಕ ಯಲಿಗಾರ ಅವರ ಸಾಧನೆಯ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.