‘ಹಾವೇರಿ ಹಿರಿಮೆ ಹಾವನೂರು ಸಂಸ್ಥಾನ’ ಕೃತಿಯು ಪ್ರಮೋದ ಎಸ್. ನಲವಾಗಲ ಅವರ ಸಂಕಲನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಹಾವನೂರು ಸಂಸ್ಥಾನದ ಸ್ಥಾನ ಹಾವೇರಿಯ ಚರಿತ್ರೆಯಲ್ಲಿ ಬಹಳ ಮುಖ್ಯವಾಗಿದೆ ಎನ್ನುತ್ತದೆ ಈ ಕೃತಿ. ಹಾವನೂರು ದೇಸಾಯಿ ಅವರ ಜನಪ್ರೀತಿ, ಸಾಮಾಜಿಕ ಕಾಳಜಿ, ಸಾಂಸ್ಕೃತಿಕ ಪರಂಪರೆಯನ್ನು ರೂಪಿಸುವಲ್ಲಿನ ಬದ್ಧತೆ ಎಲ್ಲವೂ ಬಹಳ ಮುಖ್ಯವಾಗಿದೆ.