ಕನ್ನಡ-ಕನ್ನಡಿಗ-ಕರ್ನಾಟಕ

Author : ಗೊ.ರು. ಚನ್ನಬಸಪ್ಪ

Pages 82

₹ 20.00




Year of Publication: 2002
Published by: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ
Address: ಸಿದ್ಧ ಸಂಸ್ಥಾನಮಠ, ಚಿಂಚಣಿ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ. ಸಿದ್ಧ ಸಂಸ್ಥಾನಮಠ, ಚಿಂಚಣಿ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ.

Synopsys

‘ಕನ್ನಡ- ಕನ್ನಡಿಗ-ಕರ್ನಾಟಕ ಕೃತಿಯು ಎಲ್.ಎಸ್. ಶೇಷಗಿರಿರಾವ್, ಗೊ.ರು. ಚನ್ನಬಸಪ್ಪ, ರಾ.ನಂ. ಚಂದ್ರಶೇಖರ್ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಂ. ಚಿದಾನಂದ ಮೂರ್ತಿ ಅವರು, ನಿಮ್ಮ ಕೈಯಲ್ಲಿರುವ ಈ ಕೃತಿಯ ಪರಿವಿಡಿಯನ್ನು ತೆಗೆದು ನೋಡಿ : ಆದರಲ್ಲಿರುವ ವಿಷಯ ಸಂಪತ್ತಿಗೆ ನೀವು ಮಾರುಹೋಗದೆ ಇರಲಾರಿರಿ. ಕನ್ನಡಿಗರನ್ನು ರೋಮಾಂಚನಗೊಳಿಸಿರುವ ಕವಿಗಳ ನಾಡಪ್ರೇಮ ಗೀತಗಳೇ, ಕರ್ನಾಟಕದ ಎರಡು ಸಾಏರ ವರ್ಷಗಳ ಸಾಂಸ್ಕೃತಿಕ ಸಂಪತ್ತೇ - ಇವು ಸುಲಭವಾಗಿ ನಿಮ್ಮ ಕೈಗೆ ಲಭ್ಯ. ಇಂದಿನ ಕರ್ನಾಟಕದ ಬಹುಮುಖ ಮಾಹಿತಿಯಂತೂ ನಿಮಗೆ ಇಲ್ಲಿ ಅಂಕಿ ಅಂಶಗಳ ಮೂಲಕ, ವಿವರಣೆಯ ಮೂಲಕ ಸುಲಭವಾಗಿ ಲಭ್ಯ, ಐ.ಎ.ಎಸ್‌. ಇತ್ಯಾದಿ ಪರೀಕ್ಷೆಗಳ ವಿವರ ಬೇಕೆ - ತೆಗೆದು ನೋಡಿ. ಈ ಪುಸ್ತಕದ ಸಿದ್ಧತೆಯ ಹಿಂದೆ ಹಲವರ, ಹಲವು ಕಾಲದ ಶ್ರಮವಿದೆ; ಅದು ಪ್ರೀತಿಯ ಶ್ರಮ, ಕರ್ನಾಟಕದ ಇಂದಿನ ಸ್ಥಿತಿಗತಿಗಳನ್ನು ಅಂಕಿ ಅಂಶ ವಿವರಣೆ ಮೂಲಕ ಕೊಟ್ಟು ಕರ್ನಾಟಕದ ಬಗ್ಗೆ ನಿಜವಾದ ಅರಿವು, ಪ್ರೀತಿಗಳನ್ನು ಮೂಡಿಸುವುದು ಈ ಕೃತಿಯ ಮೂಲೋದ್ದೇಶ. ಈ ಬಗೆಯ ಕೃತಿ ಬಹುಶಃ ಕನ್ನಡದಲ್ಲಿ ಇನ್ನೊಂದು ಇಲ್ಲ. ಮೊದಲ ಆವೃತ್ತಿಯ ಹತ್ತು ಸಾವಿರ ಪ್ರತಿಗಳು ಒಂದು ವರ್ಷದಲ್ಲಿ ಸುಲಭವಾಗಿ ಖರ್ಚಾದುವು. ಆ ಆವೃತ್ತಿಯ ಪರಿಷ್ಕೃತ, ವಿಸ್ತ್ರತ ರೂಪ ಇದು. ಇದು ತೀರ ಈಚಿನ ಅಂಕಿ ಅಂಶಗಳನ್ನು ಒಳಗೊಂಡಿರುವ ಅಪೂರ್ವ ಕೃತಿ; ಎಲ್ಲ ಕನ್ನಡಿಗರ ಕಣ್ಣನ್ನು ತೆರೆಯಿಸುವಂತಹುದು. ಕರ್ನಾಟಕದ ಬಗ್ಗೆ ಅಭಿಮಾನ ಇರುವ ಎಲ್ಲರೂ ಸಂಗ್ರಹಿಸಬೇಕಾದ, ಪರಿಶೀಲಿಸಬೇಕಾದ ಒಂದು ಅನನ್ಯ ಕೃತಿ. ಹೆಚ್ಚೇನು : ಇದು ಆಧುನಿಕ ಕರ್ನಾಟಕದ ಸಂಕ್ಷಿಪ್ತ ವಿಶ್ವಕೋಶ  ಎಂದಿದ್ದಾರೆ. 

About the Author

ಗೊ.ರು. ಚನ್ನಬಸಪ್ಪ
(18 May 1930)

ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೊ. ರು. ಚನ್ನಬಸಪ್ಪರವರು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿಯಲ್ಲಿ ಜನಿಸಿದರು. ಗ್ರಾಮೀಣ ಬದುಕಿನ ಬಗ್ಗೆ ಮತ್ತು ಜಾನಪದ ಕ್ಷೇತ್ರವು ಅವರ ಆಸಕ್ತಿ ಕ್ಷೇತ್ರ. 1967ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರು. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ. ರು. ಚನ್ನಬಸಪ್ಪಅವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳು. ಜಾನಪದ ವಸ್ತುವನ್ನಾಧರಿಸಿ ಬರೆದ ’ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ’ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ...

READ MORE

Related Books