‘ಹಾವೇರಿ ಜಿಲ್ಲಾ ಸಾಧಕರ ಮಾಲೆ- 12’ ಕೃತಿಯು ನಿರಂಜನ ಗುಡಿ, ವೆಂಕಟೇಶ್ ಪೂಜಾರ, ಮಲ್ಲಿಕಾರ್ಜುನ ಸಿದ್ಧಣ್ಣವರ, ಶಿವಬಸವದ ಸ್ವಾಮಿಗಳ ಲೇಖನಸಂಕಲನವಾಗಿದೆ. ಈ ಕೃತಿಯು ಪಂ. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜರ ಪರಮ ಚರಿತೆ, ಸ್ವರಲೋಕದ ದಂತಕಥೆ ಡಾ. ಗಂಗೂಬಾಯಿ ಹಾನಗಲ್ಲ, ಹಾನಗಲ್ಲ ಕುಮಾರಸ್ವಾಮಿಗಳ ಬದುಕಿನ ಚಿತ್ರಣ ಹಾಗೂ ಸಾಧನೆಯನ್ನು ಇಲ್ಲಿ ಕಾಣಬಹುದು. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.