ಈ ಗ್ರಂಥದಲ್ಲಿ ಹಳಗನ್ನಡ ಮತ್ತು ಮರಾಠಿ ಭಾಷೆಗಳ ನಡುವೆ ಇರುವ ಹಲವಾರು ರೂಪ ಸಾಮ್ಯಗಳನ್ನು ವಿವರಿಸಲಾಗಿದೆ. ವ್ಯಾಕರಣಾಂಶಗಳಲ್ಲಿ ಹಾಗೂ ಭಾಷಾಮಿಶ್ರಣದ ಸಂದರ್ಭಗಳಲ್ಲಿ ಕನ್ನಡದ ಪ್ರಭಾವ ಮರಾಠಿಯಲ್ಲಿ ಅಡಕಗೊಂಡಿರುವುದನ್ನು ವಿಮರ್ಶಿಸಲಾಗಿದೆ. ಕನ್ನಡ-ಮರಾಠಿ ಸಂಬಂಧವನ್ನು ಕೇವಲ ಭಾಷಾ ಸ್ವೀಕರಣದ ನೆಲೆಯಿಂದಷ್ಟೆ ಗಮನಿಸದೆ ದ್ವಿಭಾಷಿಕತೆಯ ಪರಿಣಾಮವಾಗಿ ಏರ್ಪಡುವ ಭಾಷಾಮಿಶ್ರಣವನ್ನು ಕೂಡ ಗಮನಿಸಲಾಗಿದೆ. ವ್ಯಾಕರಣ ಸಂಬಂಧದ ಎಳೆಗಳನ್ನು ಕೂಡ ಗುರುತಿಸಿರುವುದು ವಿಶೇಷ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ; ಅಪಭ್ರಂಶ, ಮರಾಠಿ ಹಾಗೂ ಕನ್ನಡ , ಮರಾಠಿಯಲ್ಲಿಯ ಆಖ್ಯಾತಗಳು ,ಮರಾಠಿಯಲ್ಲಿ ವಿಭಕ್ತಿ ಪ್ರತ್ಯಯಗಳು,ಜ್ಞಾನೇಶ್ಚರೀಕಾಲೀನ ಮರಾಠಿಯಲ್ಲಿಯ ಕೆಲವು ಹಳಗನ್ನಡ ಶಬ್ದ ಪ್ರಯೋಗಗಳು.
©2024 Book Brahma Private Limited.