’ಅಖಂಡ ಕರ್ನಾಟಕದ ಹೆಜ್ಜೆಗಳು’ ಪುಸ್ತಕದಲ್ಲಿ ಸಂಶೋಧಕ-ಸಾಹಿತಿ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರು ಏಕೀಕರಣಕ್ಕಾಗಿ ನಡೆದ ಚಳವಳಿಯ ಜೊತೆಗೆ ಕನ್ನಡ ಪ್ರಜ್ಞೆ ರೂಪುಗೊಂಡ ಬಗೆಯನ್ನು ವಿವರಿಸಿದ್ದಾರೆ. ಒಟ್ಟು 28 ಅಧ್ಯಾಯಗಳಲ್ಲಿ ಕರ್ನಾಟಕ-ಕನ್ನಡಕ್ಕೆ ಸಂಬಂಧಿಸಿದ ಸಂಗತಿಗಳನ್ನು ದಾಖಲಿಸಲಾಗಿದೆ. ಅಧ್ಯಾಯದ ವಿವರಗಳು ಹೀಗಿವೆ- ಕಳೆದುಹೋದ ಕನ್ನಡ, ಕನ್ನಡಕ್ಕಾಗಿ ಹುಡುಕಾಟ, ಅಖಂಡ ಸೀಮೆಗಾಗಿ ’ಕನ್ನಡ ಸಮಾಚಾರ’, ಕನ್ನಡಕ್ಕೆ ಜೀವ ತುಂಬಿದವರು, ಕಳಚಿದ ಮರಾಠಿ ಮೋಹ, ಕನ್ನಡದಲ್ಲಿ ಪಠ್ಯಪುಸ್ತಕಗಳು, ಕನ್ನಡ ಸಾಹಿತ್ಯ ಚರಿತ್ರೆಯ ಪುನರುಜ್ಜೀವನ, ಕನ್ನಡ ನಾಡಿನ ಚರಿತ್ರೆಯ ಹೊಳಪುಗಳು, ಕರ್ನಾಟಕತ್ವ ಬೀಜ ಬಿತ್ತಿದರು, ಕನ್ನಡ ನೀಲಾಂಜನಗಳು, ಆರತಿ ತಟ್ಟೆ, ಕನ್ನಡಕ್ಕೊಂದು ಗುಡಿ, ಮುಳುಗಿದ ಕನ್ನಡದ ಉಜ್ವಲ ಸೂರ್ಯ, ಏಕೀಕರಣದ ಮೊದಲ ಮೆಟ್ಟಲು, ಕನ್ನಡಿಗರನ್ನು ಬೆಸೆದ ಪತ್ರಿಕೆಗಳು, ನಾಟಕಗಳು- ಕೀರ್ತನೆಗಳು, ಮುಂಬಯಿ ಶಾಸನಸಭೆಯಲ್ಲಿ ಕನ್ನಡ ಧ್ವನಿ, ಕನ್ನಡದಲ್ಲಿ ಸ್ವಾಭಿಮಾನ ಜಾಗ್ರತೆ, ಮರಾಠಿಗರಿಗೆ ಕನ್ನಡದ ಚರಿತ್ರೆ, ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ, ಹೈದರಾಬಾದಿನಲ್ಲಿ ಕನ್ನಡ ಪತಾಕೆ, ಸಂಘ ಸಂಸ್ಥೆಗಳಿಂದ ಕನ್ನಡ ಸಂಘಟನೆ, ನಿಜಾಮನ ರಾಜ್ಯದಲ್ಲಿ ಕನ್ನಡ ಜಾಗೃತಿ, ಬಳ್ಳಾರಿಯಲ್ಲಿ ಕನ್ನಡ ಪರ ಹೋರಾಟ, ಏಕೀಕರಣಕ್ಕೆ ತುಳು - ಕೊಂಕಣಿಗಳ ಉತ್ಸಾಹ, ಕನ್ನಡದ ಸಪ್ತರ್ಷಿಗಳು, ಬಾಗಲಕೋಟೆಯ ಜಯ-ವಿಜಯರು, ನಾಡು ಕಟ್ಟಿದ ಕವಿಗಳು, ಕನಸಿನ ಭವ್ಯ ಕರ್ನಾಟಕ
ಕೊನೆಯಲ್ಲಿ ಪುಸ್ತಕ ರಚನೆಗೆ ಬಳಸಿದ ಆಕರ ಗ್ರಂಥಗಳು ಹಾಗೂ ಲೇಖನಗಳ ವಿವರ ನೀಡಲಾಗಿದೆ. ಈ ಪುಸ್ತಕವು ಕನ್ನಡ ಭಾಷೆ-ನಾಡು-ನುಡಿಯ ಬಗ್ಗೆ ಅರಿಯಬಯಸುವವರಿಗೆ ಒಂದು ಕೈಪಿಡಿಯ ಹಾಗಿದೆ.
©2024 Book Brahma Private Limited.