ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಶ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.
ದರಗಾ ಹೈದರಾಬಾದ್ ಕರ್ನಾಟಕ ಪ್ರದೇಶದ ಉದ್ದಕ್ಕೂ ಕಂಡುಬರುವ ಒಂದು ಧಾರ್ಮಿಕ ಕೇಂದ್ರ. ಸೂಫಿ ಸಂತರ ಕೇಂದ್ರಗಳಾಗಿರುವ ಇವು ಜಾತಿ, ಧರ್ಮಾತೀತವಾಗಿಯೇ ಇರುವವು. ಸೂಫಿಗಳ ಕೇಂದ್ರದ ಬಗೆಗೆ ಕನ್ನಡದಲ್ಲಿ ಹೇಳಿಕೊಳ್ಳುವಷ್ಟು ಅಧ್ಯಯನಗಳು ಇಲ್ಲವೆ ಇಲ್ಲ. ಈ ಭಾಗದ ಬದುಕಿನ, ಸಮಾಜದ ಎಲ್ಲ ಆಯಾಮಗಳಲ್ಲಿ ದರಗಾಗಳು, ಸೂಫಿಗಳು ಹಾಸುಹೊಕ್ಕಾಗಿ ಇದ್ದಾರೆ. ಹಾಗಾದರೆ, ನೂರಾರು ವರ್ಷಗಳಿಂದ ಸೂಪಿಗಳು ಈ ಭಾಗದ ಸಮಾಜದ ಭಾಗವಾಗಿ ಇದೆ. ಆದ್ದರಿಂದ ದರಗಾಗಳನ್ನು ವಿಶಿಷ್ಟವಾಗಿ ಅದ್ಯಯನ ಮಾಡುವುದು ಅವಶ್ಯ.ಆ ಮೂಲಕ ಈ ಭಾಗದ ಬದುಕು ಮತ್ತು ಸಮಾಜವನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯ.
ಈ ಪುಸ್ತಕವನ್ನು ಎರಡು ಭಾಗ ಮಾಡಿದ್ದು ಮೊದಲ ಭಾಗದಲ್ಲಿ ದರಗಾ ಎಂಬ ಬಸವರಾಜ ಕೊಡಗುಂಟಿಯವರ ಸರಳವಾದ ಒಂದು ಬರವಣಿಗೆ ಇದೆ. ಇಲ್ಲಿ ದರಗಾಗಳು, ಅವುಗಳ ಮಹತ್ವ, ಅವುಗಳ ಅದ್ಯಯನ ಅವಶ್ಯಕತೆ ಮತ್ತು ಈಗಿನ ಸಂಪುಟದ ಲೇಖನಗಳಿಗೆ ಹಾಕಿಕೊಂಡ ರಚನೆ ಮೊದಲಾದವನ್ನು ಚರ್ಚಿಸಿದ್ದಾರೆ. ಆನಂತರ ಎರಡನೆಯ ಭಾಗದಲ್ಲಿ ಹದಿನಾರು ಲೇಖನಗಳಿವೆ. ಈ ಲೇಖನಗಳು ಒಟ್ಟು ಹೈದರಾಬಾದ್ ಕರ್ನಾಟಕವನ್ನು ಪ್ರತಿನಿಧಿಸುವಂತಿವೆ. ಈ ಲೇಖನಗಳು ವಿಭಿನ್ನ ಹಿನ್ನೆಲೆಯನ್ನು ಹೊಂದಿರುವ, ವಿವಿಧ ಪಂಥಗಳಿಗೆ ಸೇರುವ, ಮತ್ತು ವೈವಿದ್ಯತೆಯನ್ನು ಹೊಂದಿರುವ ದರಗಾಗಳ ಮೇಲೆ ಇವೆ.
©2024 Book Brahma Private Limited.