ಹಿಂದುಳಿದ ಪ್ರದೇಶ ಎಂತಲೇ ಹೆಸರಾಗಿರುವ ಹೈದರಾಬಾದ್ ಕರ್ನಾಟಕದ ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳನ್ನು ಬಸವರಾಜ ಕೋಡಗುಂಟಿ ಅವರು ಬರೆದಿದ್ದಾರೆ. ಈ ಸರಣಿಯಲ್ಲಿ ಊರು, ದರಗಾ, ಕೆರೆ, ಬಾವಿ, ಶಾಸನ, ಕೋಟೆ, ರಾಜಮನೆತನ, ಕನ್ನಡ, ಬುಡಕಟ್ಟು ಮೊದಲಾದವು. ವಿಶಿಷ್ಟವಾದ ಎಲ್ಲಮ್ಮ, ಅಲ್ಲಮಪ್ರಭು ಮೊದಲಾದ ಸಂಪುಟಗಳು ಇವೆ.
ನೀರಿನ ಕೇಂದ್ರಗಳಾದ ಕೆರೆ ಮತ್ತು ಬಾವಿಗಳು ಮನುಷ್ಯ ಬದುಕಿನ ಅವಶ್ಯಕತೆಯ ಭಾಗಗಳು. ಸಮಾಜದ ಭಾಗಗಳಾದ ಧರ್ಮ, ರಾಜಕೀಯ, ಆರ್ಥಿಕತೆ, ಸಂಸ್ಕೃತಿ ಹೀಗೆ ಎಲ್ಲ ವಲಯಗಳನ್ನೂ ಒಳಗೊಂಡಿವೆ. ಅದರೊಟ್ಟಿಗೆ ಪ್ರಾಕೃತಿಕ ಮಹತ್ವವನ್ನೂ ಹೊಂದಿರುತ್ತವೆ. ಹೀಗೆ ವಿವಿಧ ಆಯಾಮಗಳಿಂದ ಕೆರೆ-ಬಾವಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಸಾಹಿತ್ಯ, ಕಲೆ, ಶಿಲ್ಪಕಲೆ ಹೀಗೆ ವಿವಿಧ ವಲಯಗಳನ್ನೂ ಇವು ಆವರಿಸಿಕೊಳ್ಳುತ್ತವೆ. ಬದುಕಿನ ಸಂಕೀರ್ಣತೆಯನ್ನು ಇವು ಒಳಗೊಂಡಿವೆ. ಈ ಎಲ್ಲ ಆಯಾಮಗಳನ್ನು ಚರ್ಚಿಸುವ ಭಿನ್ನ ಲೇಖನಗಳು ಈ ಪುಸ್ತಕದಲ್ಲಿ ಇವೆ.
©2024 Book Brahma Private Limited.