ಕನ್ನಡ ಕವಿ ಚರಿತ್ರೆ ಸಂಪುಟ-1: ಈ ಕೃತಿಯನ್ನು ಹಿರಿಯ ಸಾಹಿತಿ ಹೀ.ಚಿ. ಶಾಂತವೀರಯ್ಯ ಅವರು ಸಂಪಾದಿಸಿದ್ದು, ಕನ್ನಡದ ಕವಿಗಳ ಚರಿತ್ರಾತ್ಮಕ ಮಾಹಿತಿ ಒಳಗೊಂಡಿದೆ. ಕನ್ನಡ ಸಾಹಿತ್ಯವನ್ನು ಮೂರು ಭಾಗಗಳಾಗಿ ಅಂದರೆ ಹಳೆಗನ್ನಡ, ನಡುಗನ್ನಡ ಹಾಗೂ (ಹೊಸ) ಆಧುನಿಕ ಕನ್ನಡ ಎಂದು ವಿಂಗಡಿಸಿದೆ. ಹಳೆಗನ್ನಡ ಕವಿಗಳೆಂದರೆ ಪಂಪ, ರನ್ನ, ಪೊನ್ನ, ಜನ್ನ, ಪುಲಿಗೆರೆ ಸೋಮನಾಥ, ಪಲ್ಕುರಿಕಿ ಸೋಮನಾಥ ಇತರರು. ನಡುಗನ್ನಡ ಕವಿಗಳೆಂದರೆ ಹರಿಹರ, ರಾಘವಾಂಕ, ಭೀಮಕವಿ, ಲಕ್ಷ್ಮೀಶ, ಕುಮಾರವ್ಯಾಸ, ಜೇಡರ ದಾಸಿಮಯ್ಯ, ವಾದಿರಾಜರು, ಪುರ೦ದರದಾಸ, ಕನಕದಾಸ, ಬಸವಣ್ಣಇತರರು ಹಾಗೂ ಹೊಸಗನ್ನಡದ ಕವಿಗಳೆಂದರೆ ಮಧುರ ಚೆನ್ನ, ಶಾ೦ತಕವಿ, ಆನಂದಕಂದ, ಭಟ್ಟಾಕಳಂಕ, ಗೋವಿಂದ ಪೈ, ಆಲೂರು ವೆಂಕಟರಾಯರು, ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು), ದ.ರಾ.ಬೇಂದ್ರೆ, ಮಾಸ್ತಿ, ಶಿವರಾಮ ಕಾರ೦ತ, ವಿ.ಕೃ.ಗೋಕಾಕ್ ಇತರರು. ಈ ಎಲ್ಲ ಕವಿಗಳ ಚರಿತ್ರೆಯನ್ನು ಶಾಸ್ತ್ರೀಯವಾಗಿ ಪರಿಚಯಿಸಿದ್ದು ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.