ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡನಾಡಿನ ಹರವು ವಿಸ್ತಾರವಾಗಿತ್ತು ಎಂಬುದು ಇತಿಹಾಸ ತಿಳಿಸುತ್ತದೆ. ಆದರೆ, ಕಾಲಕ್ರಮೇಣ, ಅದರ ವಿಸ್ತಾರ ಕುಗ್ಗುತ್ತಾ, ವಿರೂಪಗೊಳ್ಳುತ್ತಾ ನಡೆದು, ಸಂಸ್ಕೃತಿಯೂ ಮಸುಕಾಗುತ್ತಾ ಬಂದಿರುವುದನ್ನು ಕಾಣುತ್ತೇವೆ. ಹೀಗೆ ಕನ್ನಡ ನಾಡು -ನುಡಿ ಸಂಸ್ಕೃತಿಯು ನಡೆದು ಬಂದ ದಾರಿ ಕುರಿತು ಈ ಕೃತಿಯಲ್ಲಿ ಖ್ಯಾತ ಸಂಶೋಧಕ ಶಂ.ಬಾ.ಜೋಶಿ ಅವರು ಬಹುವಿಸ್ತೃತ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...
READ MORE