ಡಾ,ಮಂಜುನಾಥ ಎಸ್ ಪಾಟೀಲ, ಡಾ,ಶ್ರೀನಿವಾಸ ಎಸ್ ಕಟ್ಟಿಮನಿ ಹಾಗೂ ಡಾ,ಅಜೀದ ಇ ಮಯರ್ ಅವರ ಸಂಪಾದಕತ್ವದ ಕೃತಿ ಕರ್ನಾಟಕದಲ್ಲಿ ಸ್ವಾತಂತ್ಯ್ರ ಹೋರಾಟಗಳು. ಸ್ವಾತಂತ್ರ್ಯದ ಬಯಕೆ ಮನುಷ್ಯನ ಸ್ವಬಾವದಲ್ಲೇ ಆಳವಾಗಿ ಬೇರೂರಿರುವಂತಹದು.ತನ್ನ ವೈಯಕ್ತಿಕ ಅಥವಾ ಸಮುದಾಯದ ಸ್ವಾತಂತ್ರ್ಯಕ್ಕೆ ದಕ್ಕೆ ಬಂದಾಗ ವ್ಯೆಕ್ತಿಯು ವ್ಯವಸ್ಥೆಯ ವಿರುದ್ದ ಬಂಡೇಳಲು ಪ್ರಯತ್ನಿಸುತ್ತಾನೆ.ಈ ರೀತಿಯ ಬಂಡೇಳುವಿಕೆ ಸಾಮೂಹಿಕತೆಯ ಒಪ್ಪಿಗೆಯನ್ನು ಪಡೆದುಕೊಂಡಾಗ ಅದೊಂದು ಚಳುವಳಿಯಾಗಿ ರೂಪುಗೊಳ್ಳುತ್ತದೆ.ಈ ಚಳುವಳಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಸೌಮ್ಯ ವಾಗಿ ಅಥವಾ ಉಗ್ರರೂಪವನ್ನು ಪಡೆದುಕೊಂಡು ವ್ಯವಸ್ಥೆಯನ್ನು ಬದಲಾಯಿಸುತ್ತವೆ.ಹೀಗಾಗಿ ಭಾರತೀಯ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯು ಒಂದು ಪ್ರಮುಖವಾದ ಘಟ್ಟವಾಗಿದ್ದು ಅದರಲ್ಲಿ ಕರ್ನಾಟಕದ ಪಾತ್ರವು ಇದೆ.1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಪೂರ್ವದಲ್ಲಿ ಕರ್ನಾಟಕದಲ್ಲಿಯೂ ಸಹ ಬ್ರಿಟಿಷರ ವಿರುದ್ದವಾಗಿ ಅನೇಕ ಹೋರಾಟಗಳು ಜರುಗಿದವು ಅಂತಹ ನಾನಾ ಬಗೆಯ ಚಳುವಳಿಗಳು,ಆಂದೋಲನಗಳು,ಹೋರಾಟಗಳನ್ನು ಒಂದು ಚೌಕಟ್ಟಿನೊಳಕ್ಕೆ ತಂದು ನಮ್ಮ ರಾಷ್ಟ್ರೀಯ ಚಳುವಳಿಯ ಒಂದು ಸಮಗ್ರ ಚಿತ್ರಣ ದೊರಕಿಸಿಕೊಡುವ ಹಿನ್ನೆಲೆಯಲ್ಲಿ ವಿಷಯ ತಜ್ಞರ ಲೇಖನಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಆಂಗ್ಲೋ- ಮೈಸೂರು ಹಾಗೂ ಆಂಗ್ಲೋ-ಮರಾಠ ಯುದ್ದಗಳ ನಂತರ ಕರ್ನಾಟಕದ ಬಹು ಬಾಗವು ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತ್ತು,ಅದರ ವಿರುದ್ದವಾಗಿ 1857 ರ ಪೂರ್ವದಲ್ಲಿಯೇ ಅನೇಕ ಸಶಸ್ತ್ರ ಬಂಡಾಯಗಳು ಕರ್ನಾಟಕದಲ್ಲಿ ನಡೆದಿರುವ ಕುರುಹುಗಳನ್ನು ತಿಳಿದುಕೊಳ್ಳಬಹುದು.
©2024 Book Brahma Private Limited.