ಹೇಮಾವತಿ ತೀರ ಲೇಖಕ ಮೊಹಮ್ಮದ್ ಅಜರುದ್ದೀನ್ ಅವರ ಕ್ಷೇತ್ರ ಪರಿಚಯ ಕೃತಿ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ತಮ್ಮ ಬರಹಗಳಿಂದ ಗಮನ ಸೆಳೆದವರು. ಅವರ ಹೇಮಾವತಿ ನದಿ ಹುಟ್ಟುವ ಜಾವಳಿಯಲ್ಲಿನ ಗಣೇಶ ದೇವಸ್ಥಾನದ ಬಗ್ಗೆ ಲೇಖನ ಓದಿದ್ದೆ. ಆದಾಗಿ ಅವರ ಪರಿಚಯವಾಗಿ ನನ್ನ ಕೆಲವು ಕೃತಿಗಳನ್ನು ಓದಲು ಅವರಿಗೆ ಕಳಿಸಿದ್ದೆ. ಅಂತೆಯೇ ಅವರು ತಮ್ಮ ನಾಲ್ಕು ಕೃತಿಗಳನ್ನು ಕಳಿಸಿದ್ದಾರೆ. ಅವುಗಳೆಂದರೆ ಲೇಖನ ವಿಹಾರ, ನನ್ನ ವಿಳಾಸ, ಸಂಜೆ ವಿಹಾರ ಮತ್ತು ಹೇಮಾವತಿ ತೀರ. ನನಗೆ ವಿಶೇಷವಾಗಿ ಹೇಮಾವತಿ ತೀರ ತಟ್ಟನೆ ಗಮನ ಸೆಳೆಯಿತು. ಈ ಕೃತಿ ವಿಶೇಷವಾಗಿ ಅಕ್ಕಿ ಹೆಬ್ಬಾಳು ಗ್ರಾಮದ ಸಾಹಿತ್ಯ ಸಾಂಸ್ಕೃತಿಕ ಅಧ್ಯಯನವಾಗಿದೆ. ಕನ್ನಡದ ಶ್ರೇಷ್ಠ ಪ್ರಬಂಧಕಾರರು ದೇವರು ಕೃತಿಯ ಕರ್ತೃ ಎ.ಎನ್.ಮೂರ್ತಿರಾವ್ ಇದೇ ಗ್ರಾಮದಲ್ಲಿ ಜನಿಸಿದವರು. ಇವರ ಅಕ್ಕಿ ಹೆಬ್ಬಾಳು ಲಿಲಿತ ಪ್ರಬಂಧದಲ್ಲಿ ನಮ್ಮೂರಿನ ದೇವರು ನರಸಿಂಹ, ಉಗ್ರ ನರಸಿಂಹನಲ್ಲ. ರಾಕ್ಷಸ ಸಂಹಾರದ ರೋಷವೆಲ್ಲ ಕಳೆದು ಲಕ್ಷ್ಮಿಯ ಸಾಮೀಪ್ಯದಿಂದ ಶಾಂತನಾಗಿ ಪ್ರಹ್ಲಾದನನ್ನು ಅನುಗ್ರಹಿಸಿ, ಅಭಯ ಹಸ್ತವನ್ನು ತೋರುತ್ತಿರುವ ಪ್ರಸನ್ನಮೂರ್ತಿ ಲಕ್ಷ್ಮಿನರಸಿಂಹ. ಭಕ್ತರು ದೇವರಿಗೆ ಬೆಳ್ಳಿಯ ಕೋರೆ ಹಲ್ಲುಗಳನ್ನೂ ಹೊರ ಬಿದ್ದಿರುವ ನಾಲಗೆಯನ್ನೂ ಮಾಡಿಸಿದ್ದಾರೆ. ಬೆಳ್ಳಿಯ ಹಲ್ಲುಗಳ ಕೆಳಗೆ ವಿಚಿತ್ರ ಬೆಳಕಿನಿಂದ ಕಣ್ಣುಗಳು ಹೊಳೆಯುತ್ತವೆ.
©2025 Book Brahma Private Limited.