ಕರ್ನಾಟಕ ಕಲಾ ದರ್ಶನ

Author : ಎಂ. ಎಚ್. ಕೃಷ್ಣಯ್ಯ

Pages 1800

₹ 2700.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080222035

Synopsys

ಎಂ. ಎಚ್. ಕೃಷ್ಣಯ್ಯ, ಡಾ. ವಿಜಯಾ ಹಾಗೂ ಸಿ.ಆರ್. ಕೃಷ್ಣರಾವ್ ರಚಿಸಿದ ಕೃತಿ-ಕರ್ನಾಟಕ ಕಲಾ ದರ್ಶನ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ(2011) ಲಭಿಸಿದೆ. ಕರ್ನಾಟಕ ಸಾಂಸ್ಕೃತಿಕ ಲೋಕದ ವೈಭವವನ್ನುಸುಮಾರು 4 ಸಾವಿರಕ್ಕೂ ಅಧಿಕ ಕಪ್ಪು-ಬಿಳುಪು ಹಾಗೂ ಬಣ್ಣಬಣ್ಣದ ಚಿತ್ರಗಳ ಸಮೇತ ಕಟ್ಟಿಕೊಡುವ ಕೃತಿ ಇದು. ಜನಪದ, ನೃತ್ಯ, ಸಾಹಿತ್ಯ, ಸಂಗೀತ, ಸಿನಿಮಾ ಹೀಗೆ 9 ಕ್ಷೇತ್ರಗಳಲ್ಲಿಯ ಗಣ್ಯ ವ್ಯಕ್ತಿಗಳ ಪರಿಚಯ ಹಾಗೂ ಸಾಧನೆಗಳನ್ನು ಚಿತ್ರಸಮೇತ ವಿವರಿಸಲಾಗಿದೆ. ಎರಡು ಸಾವಿರ ವರ್ಷದ ಹಿಂದಿನ ಸಾಂಸ್ಕೃತಿ ಕ ಇತಿಹಾಸವನ್ನು ಎರಡು ಬೃಹತ್ ಸಂಪುಟದ ಜೊತೆಗೆ ಸಾಂದ್ರಮುದ್ರಿಕೆ ಸಹ ನೀಡಲಾಗುತ್ತದೆ.

About the Author

ಎಂ. ಎಚ್. ಕೃಷ್ಣಯ್ಯ
(21 July 1937)

ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು.  ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...

READ MORE

Awards & Recognitions

Related Books