ಇದು ಐವತ್ತು ವರ್ಷಗಳಲ್ಲಿ ಕನ್ನಡ ಭಾಷೆಯ ಹಾಗೂ ಬದುಕಿನ ಭಾಗವಾಗಿ ರೂಪಿತವಾದ ಮತ್ತು ರೂಪಿತವಾಗದ ವಿದ್ಯಮಾನಗಳನ್ನು ಅಪೂರ್ವ ಆಕರಗಳ ಮೂಲಕ ಅಧ್ಯಯನ ಮಾಡಿರುವ ಮಹತ್ವದ ಕೃತಿಯಾಗಿದ್ದು ಭಾಷಾನೀತಿ ಮತ್ತು ಭಾಷಾಯೋಜನೆ ಎನ್ನುವ ಪರಿಕಲ್ಪನೆಗಳು ಕನ್ನಡದ ಸಂದರ್ಭದಲ್ಲಿ ಹೆಚ್ಚು ಖಚಿತವಾಗಿ ಮತ್ತು ಸಾಮಾಜಿಕವಾಗಿ ಎತ್ತಿಕೊಂಡು ಇಲ್ಲಿ ಚರ್ಚಿಸಲಾಗಿದೆ. ಕನ್ನಡ ಭಾಷೆಯ ಆಂತರಿಕ ರಚನೆ, ಬಾಹ್ಯ ಪ್ರಯೋಗಗಳು ಮತ್ತು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು- ಇವುಗಳ ಅಂತರ್‌ಸಂಬಂಧವು ಮಾಹಿತಿ ಮತ್ತು ಮೌಲ್ಯಮಾಪನಗಳ ನೆಲೆಯಲ್ಲಿ ಇಲ್ಲಿ ವಿವೇಚನೆಗೆ ಒಳಪಡಿಸಲಾಗಿದೆ. ಕನ್ನಡ ಭಾಷೆಯ ಬಳಕೆಯು ಭಾವನೆಗಳ ಮಟ್ಟದಿಂದ ತೊಡಗಿ ಭಿನ್ನಕ್ಷೇತ್ರಗಳ ಆಳಕ್ಕೆ ಇಳಿಯಬೇಕಾದ ಅಗತ್ಯಗಳ ಕುರಿತು ವಿಶಿಷ್ಟ ಒಳನೋಟಗಳು ಇಲ್ಲಿ ದೊರೆಯುತ್ತವೆ. ಇಲ್ಲಿನ ಚರ್ಚೆಗಳು ಕನ್ನಡ ಭಾಷಾಭಿವೃದ್ಧಿಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಕೃತಿಯು ಒಲಗೊಂಡಿರುವ ಅಧ್ಯಾಯಗಳೆಂದರೆ: ಏಕೀಕರಣ ಸಂದರ್ಭದ ಕನ್ನಡ ಸ್ವರೂಪ, ಭಾಷಾ ನೀತಿ, ಭಾಷಾ ಯೋಜನೆ ,ಆಡಳಿತ ಶಿಕ್ಷಣ ಸಮೂಹ ಮಾಧ್ಯಮಗಳಲ್ಲಿ ಕನ್ನಡ ,ಕನ್ನಡ ಇತರ ಭಾಷೆಗಳ ಜತೆಗಿನ ಸಂಬಂಧ ೪. ಪ್ರಮಾಣೀಕರಣ, ಆಧುನೀಕರಣ ಈ , ಕನ್ನಡದ ಪ್ರಭೇದಗಳು : ನಿರ್ವಹಣೆಯ ಸಮಸ್ಯೆಗಳು : ,ಕನ್ನಡ ರಚನೆಯಲ್ಲಿನ ಪಲ್ಲಟಗಳು , ಪದರಚನ, ಪದಕೋಶ, ಮಾತು ಬರಹ ,ಕನ್ನಡ ಮತ್ತು ತಂತ್ರಜ್ಞಾನ; ಕನ್ನಡ ಮತ್ತು ಸಾಹಿತ್ಯ ,ಕನ್ನಡದ ಚಳುವಳಿಗಳು; ಕನ್ನಡದ ಗುರುತುಗಳು , ಕನ್ನಡ ಭಾಷೆಯ ಅಧ್ಯಯನಗಳು, ಕನ್ನಡದ ಆತಂಕಗಳು
©2025 Book Brahma Private Limited.