ಕರ್ನಾಟಕವನ್ನು ಒಡೆಯಬೇಕು ಅನ್ನುವ ಕೂಗು ಮತ್ತೆ ಎದ್ದಿರುವ ಹೊತ್ತಿನಲ್ಲಿ ಕರ್ನಾಟಕ ಯಾಕೆ ಒಂದಾಗಿರಬೇಕು, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರ ನಡುವೆ ರಾಜಕೀಯವಾದ ಒಗ್ಗಟ್ಟು ಕನ್ನಡಿಗರೆಲ್ಲರ ಏಳಿಗೆಗೆ ಯಾಕೆ ಮುಖ್ಯ ಅನ್ನುವ ಬಗ್ಗೆ ಕೆಲ ಹೊಸ ಆಯಾಮಗಳನ್ನು ಕನ್ನಡಿಗರ ಮುಂದಿಡುವ ಪ್ರಯತ್ನವನ್ನು “ಕರ್ನಾಟಕವೊಂದೇ” ಹೆಸರಿನ ಈ ಹೊತ್ತಗೆಯಲ್ಲಿ ಬರಹಗಾರ ವಸಂತ ಶೆಟ್ಟಿ ಮಾಡಿದ್ದಾರೆ.
ಕುಂದಾಪುರದ ಕನ್ನಡಿಗ ವಸಂತ ಶೆಟ್ಟಿ ಧಾರವಾಡದ ಕಲಘಟಗಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಕಳೆದ ಎರಡು ದಶಕಗಳಿಂದ ಬೆಂಗಳೂರು ನಿವಾಸಿ ಆಗಿದ್ದರು. ಉದಯವಾಣಿಯಲ್ಲಿ ಅಂಕಣ ಬರೆಯುವ ಅವರು ಕನ್ನಡ ಮತ್ತು ಕನ್ನಡ ನಾಡಿನ ಸಮಸ್ಯೆಗಳ ಬಗ್ಗೆ ಬರೆಯುತ್ತಾರೆ. ಬನವಾಸಿ ಬಳಗ, ಮುನ್ನೋಟ ಪುಸ್ತಕ ಮಳಿಗೆ ಅವರದು. ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ವಿಶೇಷ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕವೊಂದೇ ಇವರು ರಚಿಸಿದ ಕೃತಿಯಾಗಿದೆ. ...
READ MORE