ಕನ್ನಡ ನಾಡಿನ ಭೌಗೋಳಿಕ, ಪೌರಾಣಿಕ, ಚಾರಿತ್ರಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಸಂಸ್ಕೃತಿಯ ಸಮಗ್ರ ಪರಿಚಯವನ್ನು ಮಾಡುವ ಕೃತಿ 'ಕನ್ನಡ ನಾಡಿನ ಪರಿಚಯ'. ಸುಮಾರು 30 ವರ್ಷಗಳಿಂದ ನೋಡಿದ, ಕೇಳಿದ, ಹೇಳಿದ ಹಾಗೂ ಓದಿದ ವಿಷಯಗಳನ್ನು ಕೂಡಿ ಹಾಕಿ, ಸಂಚಯಿಸಿ, ಸಂಪಾದಿಸಿ, ಸಂಶೋಧಿಸಿ ಲೇಖಕ ಹೀ. ಚಿ. ಶಾಂತವೀರಯ್ಯ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಲೇಖಕ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ-ಚಿಕ್ಕಯ್ಯ, ತಾಯ- ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ಪೂರ್ಣಗೊಳಿಸಿದ ಅವರು ಕಾಲೇಜು ವಿದ್ಯಾಭ್ಯಾಸವನ್ನು ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿಗಳನ್ನು ಪಡೆದರು. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಹಲವಾರು ಲೇಖನಗಳು ನಗೆಬರಹಗಳು ...
READ MORE