ನವಕರ್ನಾಟಕ ಕನ್ನಡ ಮಾಲಿಕೆ-25 ರ ಅಡಿಯಲ್ಲಿ ಪ್ರಕಟಗೊಂಡ ಕೃತಿ ‘ಟಿ.ಎಸ್. ಗೋಪಾಲ್ ಅವರ ‘ಕನ್ನಡ ಕರ್ನಾಟಕ ನಾಡುನುಡಿಗಳ ಹಲವು ಅಂಕಿಅಂಶಗಳು’. ಇತಿಹಾಸದ ಕುರಿತ ವಿಚಾರಗಳು, ಕನ್ನಡ ನಾಡನ್ನು ಆಳಿದ ಪ್ರಮುಖ ರಾಜವಂಶಗಳು ಮತ್ತು ಅರಸರು, ಬಾದಾಮಿ ಚಾಲುಕ್ಯರು, ತಲಕಾಡಿನ ಗಂಗರು, ರಾಷ್ಟ್ರಕೂಟ ವಂಶ, ಕಲ್ಯಾಣದ ಚಾಲುಕ್ಯರು, ನೊಳಂಬ ವಂಶ, ಹೊಯ್ಸಳ ವಂಶ, ಆಳುಪ ವಂಶ, ದೇವಗಿರಿಯ ಸೇವುಣ ವಂಶ, ವಿಜಯನಗರ ಸಾಮ್ರಾಜ್ಯ, ಬಹುಮನಿ ಸುಲ್ತಾನರು, ಆದಿಲ್ ಷಾಹಿ ಸುಲ್ತಾನರು, ಕೆಳದಿಯ ಅರಸರು, ಮೈಸೂರು ಒಡೆಯರು ಹೀಗೆ ಹಲವಾರು ರಾಜವಂಶಗಳ ಮಾಹಿತಿಯನ್ನು ಈ ಕೈಪಿಡಿಯು ಒಳಗೊಂಡಿದೆ. ಅಷ್ಟೇ ಅಲ್ಲದೆ ಜಿಲ್ಲೆಗಳ ಮಾಹಿತಿ, ಪ್ರವಾಸಿ ತಾಣಗಳ ಕುರಿತು, ಕರ್ನಾಟಕದ ಕೃಷಿ ಮಾಹಿತಿ, ಕರ್ನಾಟಕದಲ್ಲಿರುವ ಎತ್ತರದ ಶಿಖರಗಳು, ನದಿಗಳು, ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಧಾಮಗಳು, ಸಮುದ್ರತೀರಗಳು, ವಿಮಾನ ನಿಲ್ದಾಣಗಳು ಹೀಗೆ ಹಲವಾರು ವಿಚಾರಗಳನ್ನು ಕೃತಿ ಒಳಗೊಂಡಿದೆ.
©2024 Book Brahma Private Limited.