ಚಿಂತಕ ಅ.ನ.ಕೃಷ್ಣರಾಯರು ಕನ್ನಡ ಸಾಡು-ನುಡಿ ಕುರಿತು ಬರೆದ ಪ್ರಬಂಧಗಳ ಸಂಕಲನ-ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ. ಒಣ ಅಭಿಮಾನದಿಂದ ಕನ್ನಡ ಸಾಹಿತ್ಯ ಬೆಳೆಯದು. ತುಲನಾತ್ಮಕ ದೃಷ್ಟಿಯಿಂದ ನಮ್ಮ ಸಾಹಿತ್ಯವು ಜಗತ್ತಿನ ಸಾಹಿತ್ಯದೊಡೆನೆ ಎಲ್ಲಿ ನಿಲ್ಲುತ್ತದೆ ಎಂಬುದನ್ನು ವಿಚಾರ ಮಾಡಬೇಕಿದೆ. ಸಾಹಿತ್ಯದಲ್ಲಿಎಷ್ಟೊಂದು ಅವಿನಾಶತ್ವ ಇದೆ ಎಂಬುದನ್ನು ತಿಳಿಯಬೇಕಿದೆ. ಇಲ್ಲಿ ಪ್ರಕಟವಾದ ಬಹುತೇಕ ಲೇಖನಗಳು ಮದರಾಸು ಆಕಾಶವಾಣಿಗಾಗಿ ಬರೆದವು. ಮತ್ತೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಜೀವ ಸಾಹಿತ್ಯ-ಇದನ್ನು ಹುಬ್ಬಳ್ಳಿಯ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಸಂಸ್ಕೃತಿ ಎಂದರೇನು? ಎಂಬ ಲೇಖನವು ದಾವಣಗೆರೆಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣಗಳಾಗಿವೆ.
ಸಿಂಹಾವಲೋಕನ, ರಸಾನುಭವ, ಕನ್ನಡ ನಾಟಕ, ಕೈಲಾಸಂ, ಬಸವಣ್ಣನವರ ದರ್ಶನ ಹೀಗೆ ಒಟ್ಟು 10 ವಿದ್ವತ್ ಪೂರ್ಣ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿರುವ ಲೇಖನಗಳು ಇಡೀ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರ್ಥವಲ್ಲ. ಆದರೆ ಅವು ಪ್ರತಿನಿಧಿಸುತ್ತವೆ ಎಂದೂ ಲೇಖಕರು ಹೇಳಿದ್ದಾರೆ.
©2024 Book Brahma Private Limited.