ಲೇಖಕ ಟಿ.ಎಸ್. ಗೋಪಾಲ್ ಅವರ ಭಾಷಾ ಕೈಪಿಡಿ ಕೃತಿ ʻಕನ್ನಡಕ್ಕೊಂದು ಕೈಪಿಡಿ ಭಾಗ-2ʼ. ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸಹಾಯಕವಾಗುವ ಕನ್ನಡ ಭಾಷೆ, ಕನ್ನಡ ಸಾಹಿತ್ಯ ಚರಿತ್ರೆ, ನುಡಿಗಟ್ಟುಗಳು, ಲೇಖನ ಚಿಹ್ನೆಗಳು, ಕಾವ್ಯ ಮೀಮಾಂಸೆ, ಗಾದೆ ಅರ್ಥ ವಿಸ್ತರಣೆ, ಹೊಸಗನ್ನಡ ಸಾಹಿತ್ಯ ಹೀಗೆ ವ್ಯಾಕರಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಳ ಪರಿಚಯವನ್ನು ಲೇಖಕರು ಎರಡು ಭಾಗಗಲ್ಲಿ ಹೇಳುತ್ತಾರೆ. ಅಕ್ಷರ, ಸಮಾಸ, ಛಂದಸ್ಸು, ಕ್ರಿಯಾಪದ, ನಾನಾರ್ಥ, ಕನ್ನಡವನ್ನು ತಪ್ಪಿಲ್ಲದೆ ಬರೆಯುವ ಬಗೆಗಿನ ಕುರಿತ ಸಂಕ್ಷಪ್ತ ಮಾಹಿತಿಗಳೂ ಈ ಪುಸ್ತಕ ಒಳಗೊಂಡಿದೆ.
ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ...
READ MORE