‘ಆಡಳಿತದಲ್ಲಿ ಕನ್ನಡವೇ ಏಕೆ ಬೇಕು?’ ಕೃತಿಯು ಮಹದೇವ ಬಣಕಾರ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ದಾಖಲೆಗಳನ್ನು ಈ ಕೃತಿಯು ಒಳಗೊಂಡಿದೆ. ಕನ್ನಡ ನಾಡಿನ ಬೇರೆ ಬೇರೆ ಭಾಗದಲ್ಲಿ ಆಡಳಿತ ನಡೆಸಿದ ವಿದೇಶೀಯರು ಕನ್ನಡವನ್ನು ಹೇಗೆ ಬಳಸಿದರು ಎನ್ನುವ ಮಹತ್ವದ ದಾಖಲೆಗಳು ಇಲ್ಲಿವೆ. ಇದು ಒಂದು ಕಡೆ ಇತಿಹಾಸದ ದಾಖಲಾತಿಯಾದರೆ ಇನ್ನೊಂದು ಕಡೆ ಭಾಷೆಯ ಬೆಳವಣಿಗೆಯ ದಾಖಲಾತಿಯೂ ಆಗಿದೆ. ಈ ಸಾಮಾಗ್ರಿಗಳನ್ನು ಬಳಸಿಕೊಂಡು ಹಲವು ಮಾದರಿಯ ಅಧ್ಯಯನಗಳು ನಡೆಯುವುದಕ್ಕೆ ಅವಕಾಶವಿದೆ. ಭಾರತೀಯ ಭಾಷೆಗಳಲ್ಲಿಯೇ ಅಪರೂಪ ಎನ್ನಿಸುವ ಈ ಕೃತಿಯ ಕನ್ನಡದ ಘನತೆಯನ್ನು ಹೆಚ್ಚಿಸುತ್ತದೆ ಇನ್ನೊಂದು ಕಡೆ ನಾವು ಗಮನಿಸಿದ ಚರಿತ್ರೆಯನ್ನೂ ಅನಾವರಣಗೊಳಿಸುತ್ತದೆ.
©2024 Book Brahma Private Limited.