ಕನ್ನಡ ಮಾತನಾಡುವ ಭಾಷಿಕರನ್ನು ಒಂದು ಆಡಳಿತ ವ್ಯಾಪ್ತಿಗೆ ತಂದದ್ದು 1956ರಲ್ಲಿ. ಭಾಷಾವಾರು ಪ್ರಾಂತ್ಯ ರಚನೆಗೆ ನಡೆದ ಹೋರಾಟವನ್ನು ಕರ್ನಾಟಕದ ಏಕೀಕರಣದ ಹೋರಾಟ ಎಂದು ಗುರುತಿಸಲಾಗುತ್ತದೆ. ವಿವಿಧ ಆಡಳಿತಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕರನ್ನು 1956ರ ನವೆಂಬರ್ 1ರಂದು ಒಂದೆಡೆ ಸೇರಿ ’ಮೈಸೂರು’ ರಾಜ್ಯ ಸ್ಥಾಪನೆಯಾಯಿತು. ಮುಖ್ಯಮಂತ್ರಿ ದೇವರಾಜ ಅರಸು ಅವರು 1973ರಲ್ಲಿ 'ಕರ್ನಾಟಕ' ಎಂದು ನಾಮಕರಣ ಮಾಡಿದರು.
’ಕನ್ನಡ ನಾಡು’ ಮೂಡಿ ಬರಲು ನಡೆದ ಹೋರಾಟ, ಅದರ ಹಿಂದಿರುವ ಸೋಲು-ಗೆಲುವುಗಳ ಕತೆಯನ್ನು ಇತಿಹಾಸಕಾರ ಎಚ್.ಎಸ್. ಗೋಪಾಲರಾವ್ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಿಗೆಯಿದು. ಸಮರ್ಥ ಕರ್ನಾಟಕ ತಲೆ ಎತ್ತಲು ನಾವು ನಮ್ಮ ಇತಿಹಾಸ ತಿಳಿಯುವ ಪ್ರಯತ್ನ ಈ ಕೃತಿಯಲ್ಲಿದೆ.
©2024 Book Brahma Private Limited.