‘ಹಾವೇರಿ ಜಿಲ್ಲಾ ಸಾಧಕರ ಮಾಲೆ -18’ ಕೃತಿಯು ಪ್ರಭಣ್ಣ ಅರಗೋಳ, ಶಿವಾನಂದ ಕ್ಯಾಲಕೊಂಡ, ಆಶಾ ಗುಡಿ ಅವರ ಸಂಕಲನವಾಗಿದೆ. ಈ ಕೃತಿಯು ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕ, ಸಾಹಿತ್ಯ ಕ್ಷೇತ್ರದಲ್ಲಿ ಸದಾ ಹಸಿರಾಗಿರುವ ಜಿ.ಎಸ್. ಆಮೂರ ಹಾಗೂ ರಾಕು ಅವರ ಸಾಧನಾ ವಿಚಾರವನ್ನು ಕಟ್ಟಿಕೊಡುತ್ತದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿದೆ.