ಎದುರಿಸಿ ನಿಲ್ಲುವ ಮನೋಧೈರ್ಯ, ಹಿಂದಿರುಗಿ ನೋಡದೆ, ಹೆಜ್ಜೆಯನ್ನು ಹಿಂದಕ್ಕಿಕ್ಕದ ಹಠಮಾರಿತನ ನೂರು ಆಸೆಗಳ ಆವೇಶ, ಸಿಂಹದ ನಡಿಗೆ, ಭಾರಿ ಗುಂಡಿಗೆ, ಮುಲಾಜಿಗೆ ಮಣಿಹಾಕದ ಮಹಾದರ್ಪ,ಕಪಟ ರಹಿತ ಶುದ್ಧ ಜೀವನ, ಸಮಸಮಾಜ ಕಲ್ಪನೆಯ ಸರಳ ವ್ಯಕ್ತಿತ್ವ ಆಡಂಬರದಿಂದ ದೂರ, ನೇರಮಾತು, ದಿಟ್ಟ ನಡವಳಿಕೆ, ಸ್ಪಷ್ಟ ಹೆಜ್ಜೆ, ಧಣಿವರಿಯದ ದುಡಿಮೆ, ಸೃಜನ ಶೀಲತೆಯ ಸಮಗ್ರ ರೂಪ, ಭಾಷಾ ಪ್ರೇಮಿ, ಕ್ಲಿಷ್ಟ ಬರಹಗಾರ, ನಿಜ ಅರ್ಥದ ಬಂಡಾಯಗಾರ ಎಲ್ಲರೂ ತನವರೆನ್ನವು ಧಾರಳತನ ಮಗುವಿನಂತಹ ಮುಗ್ಧತನ, ಪಾರದರ್ಶಕ ವ್ಯಕ್ತಿತ್ವ, ಸರ್ವಜನ ಸ್ನೇಹಿ, ಸಹೃದಯಿ, ರಂಗಬ್ರಹ್ಮ ರಜತ ಕಿರೀಟ, ಯಲಹಂಕ ಕ್ಷೇತ್ರದರ್ಶಿನಿಯ ಕಲ್ಪನೆ ಮತ್ತು ಕೃತಿ ಮುಖ್ಯ.
ಎಸ್.ಎಲ್. ಎನ್. ಸ್ವಾಮಿ ಮೂಲತಃ ಚಾಮರಾಜನಗರದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮೊ ಕೋರ್ಸ್ ಪಡೆದಿದ್ದಾರೆ. ಉದಯ ಟಿವಿ, ಜೀ ಕನ್ನಡ,ಈ ಟಿವಿಯಲ್ಲಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಯಲಹಂಕದ 'ರಂಗಸ್ಥಳ' ರಂಗಶಿಕ್ಷಣ ಕೇಂದ್ರದಲ್ಲಿ ಯೋಜನಾ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಅಧ್ವೆತ ಅನುಸಂಧಾನಂ, ಪುರುಷೋತ್ತಮ ಪರ್ವ, ಯಲಹಂಕ ಕ್ಷೇತ್ರ ದರ್ಶಿನಿ, ...
READ MORE