ಸಂಸ್ಕೃತಿ ಸಂಶೋಧಕ ಶಂ.ಬಾ. ಜೋಶಿ ಅವರು ಕನ್ನಡ-ಕರ್ನಾಟಕ-ಕನ್ನಡಿಗ ಕುರಿತು ನಡೆಸಿದ ಚಿಂತನೆಯ ಲೇಖನಗಳ ಸಂಗ್ರಹ ಕೃತಿ-ಕನ್ನಡದ ನೆಲೆ. ಕೃತಿಯಲ್ಲಿ ಇತಿಹಾಸವೆಂದರೇನು? ಇತಿಹಾಸ ಅಧ್ಯಯನ ಏಕೆ ಮುಖ್ಯ?, ಕರ್ಣಾಟ ಶಬ್ದದ ಪ್ರಾಚೀನ ಉಲ್ಲೇಖಗಳು, ಕರ್ಣಾಟ ಅಸ್ತಿತ್ವದ ಬಗ್ಗೆ ಸಂದೇಹ, ಕನ್ನಡದ ಹುಟ್ಟು, ಭಾಷೆ ಎಂದರೇನು? ಕರಣರೂ-ನಾಟರೂ ಒಂದೇ ಜನಾಂಗ, ಸಿಂಧೂ -ಪಂಜಾಬಿನವರೆಗೆ ಹಬ್ಬಿದ್ದ ದ್ರಾವಿಡರು, ಕನ್ನರ ಪೂರ್ವ ಪೀಠಿಕೆ, ಲಾಟ-ಕರ್ಣಾಟ ಎಂಬ ಪ್ರಾಚೀನ ಪರಂಪರೆ ಹೀಗೆ ವಿವಿಧ ಚಿಂತನೆಯ ವಿದ್ವತ್ ಪೂರ್ಣವಾದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
ಕನ್ನಡಿಗರಿಗೆ ತಮ್ಮತನದ ಅರಿವಿನ ಎಲ್ಲೆಯನ್ನು ವಿಸ್ತರಿಸುವ ಕೃತಿಯಾಗಿದೆ. ಕನ್ನಡದ ಹುಟ್ಟು, ಭಾಷೆ, ಸಂಸ್ಕೃತಿಯ ಬಳಕೆ, ಉಳಿಕೆಯ ಬಗೆಗೆ ಆದ್ಯತೆ ನೀಡಬೇಕಾಗಿರುವ ಅಗತ್ಯತೆಯನ್ನು ಈ ಕೃತಿ ಪ್ರತಿಪಾದಿಸುತ್ತದೆ. 1952ರಲ್ಲಿ ಈ ಕೃತಿಯನ್ನು ಧಾರವಾಡದ ಸಮಾಜ ಪುಸ್ತಕಾಲಯವು ಪ್ರಕಟಿಸಿತ್ತು.
©2024 Book Brahma Private Limited.