1956 ಏಕೀಕರಣದ ನಂತರ ಕನ್ನಡ ಹೋರಾಟಗಳು ಹೇಗಿದ್ದವು, ಅದು ಎಷ್ಟರಮಟ್ಟಿಗೆ ಛಾಪು ಮೂಡಿಸಿದ್ದವು, ಹೋರಾಟದ ಫಲಶ್ರುತಿ, ಕನ್ನಡ ಚಳುವಳಿ ಬಲಗೊಳ್ಳಲು ಕಾರಣ ಹೀಗೆ ಪ್ರಮುಖ ವಿಷಯಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಕನ್ನಡ ಪರ ಹೋರಾಟವನ್ನುಹತ್ತಿರದಿಂದ ಕಂಡ ಲೇಖಕರು ಪ್ರಮುಖ ಕನ್ನಡ ಪರ ಹೋರಾಟಗಳ ಕುರಿತು ವಿವರಿಸಿದ್ದಾರೆ.
ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು. ...
READ MORE