ಪಿ.ವಿ ನಾರಾಯಣ ಅವರ ಕೃತಿ ಬಳ್ಳಿಗಾವೆ. ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಬಳ್ಳಿಗಾವೆ ತುಂಬ ಪ್ರಖ್ಯಾತವಾದ, ಪ್ರಮುಖವಾದ ಊರಾಗಿದ್ದಿತು. ಧರ್ಮಗಳಿಗೆ ಇಲ್ಲಿ ಸಿಗುತ್ತಿದ್ದ ಪ್ರೋತ್ಸಾಹಕ್ಕಾಗಿ, ಇಲ್ಲಿ ದೊರೆಯುತ್ತಿದ್ದ ಶ್ರೇಷ್ಠ ರೀತಿಯ ವಿದ್ಯಾಭ್ಯಾಸಕ್ಕಾಗಿ, ಇಲ್ಲಿ ನಿರ್ಮಿತವಾಗಿದ್ದ ಪವಿತ್ರ ದೇವಾಲಯಗಳಿಗಾಗಿ ಇದು ತುಂಬ ಹೆಸರುವಾಸಿಯಾದ ಊರಾಗಿತ್ತು. ಬಳ್ಳಿಗಾವೆ ಈಗ ಒಂದು ಸಣ್ಣ ಹಳ್ಳಿ, ಕುಗ್ರಾಮ ಎನ್ನ ಬಹುದು. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ ತಾಲ್ಲೂಕಿದೆ. ಆ ತಾಲ್ಲೂಕಿನ ಶಿರಾಳಕೊಪ್ಪಕ್ಕೆ ಒಂದು ಮೈಲಿದೂರ ದಲ್ಲಿ ಅದೇ ಹೋಬಳಿಗೆ ಸೇರಿದ ಊರು ಈ ಬಳ್ಳಿಗಾವೆ. ಈ ಊರಿರುವ ಪ್ರದೇಶ ಮಲೆನಾಡೆನಿಸಿಕೊಳ್ಳುವುದಿಲ್ಲ. ಆದರೆ ಇದು ಮಲೆನಾಡಿಗೆ ಅಂಟಿಕೊಂಡ ಸೆರಗು. ಈ ಪ್ರದೇಶಕ್ಕೆ ಹೋದರೆ ಈಗಲೂ ಹಲವಾರು ಸಣ್ಣದೊಡ್ಡ ಕೆರೆಗಳು ಕಾಣಿಸುತ್ತವೆ. ಇವು ಗಳಲ್ಲಿ ತಾವರೆ ಮುಂತಾದ ನೀರಿನಲ್ಲಿ ಬೆಳೆಯುವ ಹೂವುಗಳು ಬೆಳೆದಿರುವುದನ್ನು ನೋಡಬಹುದು. ನೀರು ಹೀಗೆ ಸಮೃದ್ಧವಾಗಿ ದೊರೆಯುವುದೆಂದಮೇಲೆ ಬೆಳೆ ಯ ಚೆನ್ನಾಗಿರಲೇಬೇಕು ಹೀಗೆ ಬಳ್ಳಿಗಾವೆ ಎಂಬ ಕುಗ್ರಾಮದ ಸಂಪೂರ್ಣ ಅಧ್ಯಯನವನ್ನು ಪಿ.ವಿ ನಾರಾಯಣ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
©2024 Book Brahma Private Limited.