‘ಕನ್ನಡ ಕರ್ನಾಟಕ ಚಿಂತನೆಗಳು’ ಕೃತಿಯು ಬಿ.ಜಿ. ಬಣಕಾರ ಅವರ ಕರ್ನಾಟಕ ಕುರಿತ ಚಿಂತನ ಬರಹಗಳ ಸಂಕಲನವಾಗಿದೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಸಾರ್ವಕಾಲಿಕ ನೆಲೆಗಳ ಇಲ್ಲಿನ ಚಿಂತನೆಗಳು ಹೊಸ ಪೀಳಿಗೆಯನ್ನು ತಲುಪುವ ಅಗತ್ಯತೆ ಬಹಳಷ್ಟಿದೆ. ಲೇಖಕರ ನಾಡು ನುಡಿಯ ಚಿಂತನೆ ಇಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ.
ಬಸವಣ್ಣೆಪ್ಪ ಗಡ್ಲೆಪ್ಪ ಬಣಕಾರ (ಬಿ.ಜಿ. ಬಣಕಾರ) ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನವರು. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದರು. ಕರ್ನಾಟಕದ ವಿಧಾನ ಸಭೆಯ ಮಾಜಿ ಅಧ್ಯಕ್ಷರಾಗಿದ್ದರು. ಇವರು ಬರೆದ ಸಮಗ್ರ ನೋಟ ಕೃತಿಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಸಹಕಾರ ರಂಗದ ಏಳು ಬೀಳುಗಳು ಕುರಿತು ಅವರು ಹತ್ತು ಹಲವು ಲೇಖನಗಳಣ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರು 07-02-2018 ರಂದು ನಿಧನರಾದರು. ...
READ MORE