ಕನ್ನಡ ನುಡಿಯ ಆಕರ ಕೋಶವು ಕನ್ನಡ ನುಡಿಯ ಚರಿತ್ರೆ, ಕನ್ನಡ ನುಡಿಯ ರಚನೆ, ಪದಕೋಶ, ಕನ್ನಡ ನುಡಿಯ ಬಳಕೆ, ಕನ್ನಡ ಮತ್ತಿ ಇತರ ನುಡಿಗಳ ನಡುವಿನ ಸಂಬಂಧ ದ್ವಿಭಾಷಿಕತೆ ಮತ್ತು ಬಹುಭಾಷಿಕತೆಯ ಪರಿಣಾಮಗಳು, ಕನ್ನಡ ನುಡಿಯ ಪ್ರಭೇದಗಳು, ವೃತ್ತಿ ಭಾಷೆ, ಕನ್ನಡ ನುಡಿ ಕಲಿಕೆ ಮತ್ತು ಕಲಿಸುವಿಕೆ, ಕನ್ನಡ ಬರವಣಿಗೆ, ನುಡಿ-ನಾಡು-ನಾಡವರು ಕನ್ನಡ ಮಾತನಾಡುವ ಪ್ರವೇಶಗಳು, ಕನ್ನಡ ಸಂಸ್ಕೃತಿ ಹೀಗೆ ಕನ್ನಡ ನುಡಿ ಚರಿತ್ರೆ, ರಚನೆ ಮತ್ತು ಬಳಕೆಗಳನ್ನು ಪರಿಚಯಿಸುವ ಕೃತಿಯಾಗಿದೆ.
ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...
READ MORE