ಸ್ವತಂತ್ರ ಭಾರತದ ಒಕ್ಕೂಟ ವ್ಯವಸ್ಥೆಯ ಅಂಗವಾಗಿರುವ ಕರ್ನಾಟಕಕ್ಕೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಕ್ಕಿವೆಯೇ? ನೆಲ-ಜಲ-ಭಾಷೆಯಲ್ಲಿ ಆಗಿರುವ ಅನ್ಯಾಯಗಳು ಎಂತಹವು? ರಾಜಕೀಯ ಪಕ್ಷಗಳು ಕರ್ನಾಟಕದ ಕುರಿತಂತೆ ಹೇಗೆ ವರ್ತಿಸಿವೆ ಇತ್ಯಾದಿ ಅಂಶಗಳನ್ನು ಜ್ವಲಂತ ಕರ್ನಾಟಕದೊಡನೆ ಇಟ್ಟು ನೋಡುತ್ತದೆ ಕೃತಿ.
ಕನ್ನಡ ಭಾಷೆ-ಸಂಸ್ಕೃತಿಯ ಬಗ್ಗೆ ವಿಶೇಷ ಆಸಕ್ತಿ ಹಾಗೂ ಕಾಳಜಿ ಹೊಂದಿರುವ ಆನಂದ ಜಿ. ಅವರು ಬನವಾಸಿ ಬಳಗದ ಸಕ್ರಿಯ ಸದಸ್ಯರು. ಕನ್ನಡ-ಕರ್ನಾಟಕ ಕುರಿತು ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನಮ್ಮ ಮೆಟ್ರೋ ಹಿಂದಿ ಬೇಡ, ಕನ್ನಡಿಗ ಮರೆವು ಅರಿವು, ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE