ಸಾಮಾಜಿಕ ಭಾಷೆ ಮತ್ತು ಆಡುನುಡಿಯ ಒಡಲೇ ಸಂಭಾಷಣೆಗಳಾಗಿರುತ್ತವೆ. ಅವು ಭಾಷಾ ಏರಿಳಿತಗಳು ಮತ್ತು ಸಾಮಾಜಿಕ ರಚನೆಗಳ ಸಂಬಂಧಗಳೆಡೆ ಹೇಗೆ ಬೆಸುಗೆ ಸಾಧಿಸಿದೆ ಮತ್ತು ಕನ್ನಡ ಬಹುಭಾಷಿಕತೆಯ ವೈವಿಧ್ಯತೆ ಸ್ವರೂಪಗಳು ಈ ಪುಸ್ತಕದಲ್ಲಿ ಉಲ್ಲೇಖಿತವಾಗಿದೆ. ಇತಿಹಾಸ ಮತ್ತು ವಿಕಸಿತ ಭಾಷಾ ಶಾಸ್ತ್ರದ ಮುಖಾಂತರ ಭಾಷೆಯ ಮೇಲಿನ ಸಂಶೋಧನೆ ಹೇಗೆ ಭಾಷೆಗಳು ಬದಲಾಗುತ್ತವೆ, ಭಾಷೆಗಳ ಉಗಮ ಮತ್ತು ಬೆಳವಣಿಗೆ ಮುಂದುವರಿದ ಕಾಲ ಘಟ್ಟದಲ್ಲಿ ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ ಕನ್ನಡ ಭಾಷಾತಜ್ಞರು, ಹೆಸರಾಂತ ಕನ್ನಡ ಪ್ರಾಧ್ಯಾಪಕರು ಇಲ್ಲಿ ವಿಶ್ಲೇಷಿಸಿ ಬರೆದ ಹದಿನೈದು ಲೇಖನಗಳ ಸಂಗ್ರಹವೆ ’ಕನ್ನಡ ಭಾಷಾವಿಜ್ಞಾನ ಸಂಶೋಧನೆ: ಇಂದು’ ಕೃತಿ.
©2025 Book Brahma Private Limited.