`ಹಳಗನ್ನಡ ನಿಘಂಟು’ ಕೃತಿಯು ಎನ್. ಬಸವಾರಾಧ್ಯ ಅವರ ನಿಘಂಟಾಗಿದೆ. ಕೃತಿಯಲ್ಲಿ ರನ್ನ ಕಂದ, ಶಬ್ಧಮಣಿದರ್ಪಣಂ, ಕರ್ಣಾಟಕ ನಿಘಂಡು, ಚತುರಾಸ್ಯ ನಿಘಂಟು, ಕಬ್ಬಿಗರ ಕೈಪಿಡಿ, ಕರ್ಣಾಟಕ ಶಬ್ದ ಮಂಜರಿ, ಕರ್ಣಾಟಕ ಸಂಜೀವನಂ, ಕರ್ಣಾಟಕ ಭಾರತ ನಿಘಂಟು, ಕವಿ ಕಂಟಪಾಠಂ, ಶಬ್ದಾರ್ಥ ಕೋಶ ವಿಚಾರಗಳನ್ನು ಒಳಗೊಂಡಿದೆ. ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥ ಕೋಶದೊಡನೆ ವಿದ್ವತ್ತೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.
ಸಂಶೋಧಕ, ಲೇಖಕ ಎನ್. ಬಸವಾರಾಧ್ಯ ಅವರು ಮೂಲತಃ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯವರು. ನಂಜುಂಡಾರಾಧ್ಯ ಬಸವಾರಾಧ್ಯ ಇವರ ಕಾವ್ಯನಾಮ. 1926 ಫೆಬ್ರುವರಿ 20 ರಂದು ಜನಿಸಿದರು. ತಂದೆ ನಂಜುಂಡಾರಾಧ್ಯರು 3 ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸುಮಾರು 6 ವರ್ಷ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ತಾಯಿ ಗಿರಿಜಮ್ಮ. ಗೌರಿಬಿದನೂರು ಹಾಗೂ ಬೆಂಗಳೂರಿನ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತದ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸ್ನಾತಕ ವಿಶೇಷ ತಜ್ಞರಾಗಿ ವೃತ್ತಿಜೀವನ ಆರಮಭಿಸಿದ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ...
READ MORE