ಕನ್ನಡದ ಮಹತ್ವದ ಭಾಷಾಶಾಸ್ತ್ರಜ್ಞರಲ್ಲಿ ಒಬ್ಬರಾದ ಶಂ.ಬಾ. ಜೋಶಿಯವರ ‘ಕನ್ನಡ ನುಡಿಯ ಜೀವಾಳ’ ಕೃತಿಯು ಕನ್ನಡ ನುಡಿಯ ಹುಟ್ಟಿನ ಕುರಿತು ಮಹತ್ವದ ಬೆಳಕನ್ನು ಚೆಲ್ಲುತ್ತದೆ. ಭಾಷೆಯ ಶಬ್ಧಗುಣ ಮತ್ತು ಅರ್ಥಗುಣದ ಬಗ್ಗೆ ಈವರೆಗೂ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಕೃತಿ ಕನ್ನಡಕ್ಕೆ ವಿಶಿಷ್ಟವಾದ ನಾದದ ಗುಣದ ಕುರಿತು ಅರ್ಥಪೂರ್ಣ ಸಂಚಿಕೆಯನ್ನು ಬೆಳೆಸಿದೆ. ಉದಾಹರಣೆಗಳ ಮೂಲಕ ಅದನ್ನು ಬೆಳೆಸಿರುವ ಕ್ರಮ ಗಟ್ಟಿಯಾದ ಸೈದ್ಧಾಂತಿಕ ಚೌಕಟ್ಟನ್ನು ರೂಪಿಸಿದೆ. ಭಾಷಾಶಾಸ್ತ್ರಕ್ಕೆ ಹಲವು ಮಹತ್ತರವಾದ ಒಳನೋಟಗಳನ್ನು ಈ ಕೃತಿಯು ನೀಡುತ್ತದೆ.
©2024 Book Brahma Private Limited.