`ಹಾವೇರಿ ಜಿಲ್ಲಾ ಸಾಧಕರ ಮಾಲೆ-19’ ಕೃತಿಯು ಚಿದಂಬರ ಕುಲಕರ್ಣಿ, ಎಚ್.ಐ. ತಿಮ್ಮಾಪುರ, ನಿಂಗಪ್ಪ ಪಳಗೇರಿ, ರಾಜೇಶ್ವರಿ ರವಿ ಸಾರಂಗಮಠ ಅವರ ಸಂಕಲನವಾಗಿದೆ. ಈ ಕೃತಿಯು ಅಗಡಿ ಆನಂದವನ, ಸವಣೂರ ಸಂಸ್ಥಾನ, ಮದಗದ ಕೆಂಚಮ್ಮ, ವಿ.ಎಸ್. ಕಾಶೆಟ್ಟಿ ಅವರ ಸಾಧನಾ ವಿಚಾರಗಳನ್ನು ಒಳಗೊಂಡಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಈ ಕೃತಿಯು ಬಿಡುಗಡೆಗೊಂಡಿದೆ.