‘ಹಾವೇರಿ ಜಿಲ್ಲಾ ಸಾದಕರ ಮಾಲೆ -11’ ಕೃತಿಯು ಪ್ರಕಾಶ ಎಸ್. ಮನ್ನಂಗಿ, ಮಹಾದೇವ ಎಫ್ ಕರಿಯಣ್ಣನವರ, ರಾಜಾಬಕ್ಷು ಸಿ. ಮಣ್ಣೂರ, ಸಂಧ್ಯಾರಾಣಿ ದೇಶಪಾಂಡೆ, ಸಿದ್ದೇಶ್ವರ ಹುಣಸೀಕಟ್ಟಿಮಠ ಅವರ ಲೇಖನಸಂಕಲನವಾಗಿದೆ. ಇಲ್ಲಿ ಮೈಲಾರ ಮಹಾದೇವಪ್ಪ, ಸಿದ್ಧಮ್ಮ ಮೈಲಾರ, ಫಕೀರಪ್ಪ ತಾವರೆ, ಷಡಕ್ಷರಪ್ಪ ಮಹಾರಾಜಪೇಟ, ಸ್ವಾತಂತ್ಯ್ರಯೋಧ ಶಂಕರಗೌಡ ಪಾಟೀಲ್ ಅವರ ಬದುಕಿನ ಚಿತ್ರಣವಿದೆ. ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.