ಶಿವಮೊಗ್ಗ ಜಿಲ್ಲೆಯ ಆಯ್ದ 50 ಸ್ಥಳಗಳಲ್ಲಿನ ದೇವಾಲಯಗಳ ಪರಿಚಯ ಹಾಗೂ ಮಾರ್ಗಸೂಚಿ. ವಿಶೇಷತಃ ಕಾಳಾಮುಖ ಪಂಥ ಹಾಗೂ ನಾಗಭೈರವನ ವಿಷಯಗಳನ್ನು ಕುರಿತಂತೆ ಅವರೊಡನೆ ನಡೆಸಿದ ಮಾತುಕತೆ ನನಗೆ ಹೊಸ ಹೊಳಹುಗಳನ್ನು ತಂದುಕೊಟ್ಟಿರುವುದುಂಟು, ಸಂಶೋಧನೆ, ವಿಜ್ಞಾನದಲ್ಲಿ ಜನಪ್ರಿಯ ವಿಜ್ಞಾನವೆಂಬ ವಿಭಾಗವಿದೆಯಷ್ಟೆ ಅದರಲ್ಲಿ ವೈಜ್ಞಾನಿಕ ವಿವರಗಳಿಗಿಂತ ಹೆಚ್ಚಿಗೆ ವಿಜ್ಞಾನದಿಂದ ಒದಗುವ ಪ್ರಯೋಜನಗಳ ಬಗ್ಗೆ ಹೇಳಲಾಗುತ್ತದೆ. ಶ್ರೀನಿವಾಸಮೂರ್ತಿಯವರ ಇತಿಹಾಸದ ಬರವಣಿಗೆ ಅದೇ ಶೈಲಿಯದು, ಇದನ್ನು ಜನಪ್ರಿಯ ಇತಿಹಾ ಎನ್ನಬಹುದು.
ಶ್ರೀನಿವಾಸಮೂರ್ತಿ ಎನ್. ಎಸ್. ರವರು ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್. ಎಸ್. ಅವರ ಪುತ್ರರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು, ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಮೂಲತಃ ಶಿವಮೊಗ್ಗದಲ್ಲಿ ನೆಲೆಸಿದ್ದು ಪ್ರಸ್ತುತ ಕಾರ್ಯ ನಿಮಿತ್ತ ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿರುವ ಇವರು ವಿವಿಧ ಬಳಗದ ಮೂಲಕ ಇತಿಹಾಸದ ಹೊಸ ಹೊರಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.. ಶಿಲ್ಪಕಲಾ ದೇವಾಲಯಕ್ಕೆ ದಾರಿ ಹೆಸರಿನಲ್ಲಿ 250 ಅಂಕಣಗಳ ...
READ MORE