'ಗೋಕಾಕ ಚಳವಳಿ ಮತ್ತು ಕನ್ನಡ ಅಭಿವೃದ್ಧಿ' ಡಾ. ಮಂಜುನಾಥ ಬಮ್ಮನಕಟ್ಟಿ ಅವರ ಪಿಎಚ್. ಡಿ. ಪದವಿಯ ಸಂಶೋಧನಾ ಕೃತಿ. ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ.ರಾಮಕೃಷ್ಣ ಮರಾಠ ಅವರ ಮಾರ್ಗದರ್ಶನದಲ್ಲಿ ನಡೆಸಿದ ಈ ಅಧ್ಯಯನಕ್ಕೆ ಅವರಿಗೆ ಡಾಕ್ಟರೇಟ್ ಪದವಿ ಸಿಕ್ಕಿದೆ. ಗೋಕಾಕ ಚಳವಳಿ, ಕರ್ನಾಟಕದಲ್ಲಿ ಕನ್ನಡದ ಅಳಿವು ಉಳಿವಿನ ಪ್ರಶ್ನೆಯಾಗಿದ್ದಾಗ ಉಳಿವಿಗಾಗಿ ನಡೆದ ದೊಡ್ಡ ಹೋರಾಟ ಅದಾಗಿತ್ತು. ಈ ವಿಷಯವನ್ನು ಕುರಿತು ಮಂಜುನಾಥ ಅವರು ಈ ಅಧ್ಯಯನದಲ್ಲಿ ಬಹು ದೊಡ್ಡ ಹರವು ರೂಪಿಸಿದ್ದಾರೆ. ಇದಕ್ಕಾಗಿ ಅವರು ಅನೇಕ ಆಕರಗಳನ್ನು ಆಶ್ರಯಿಸಿದ್ದಾರೆ. ಏಳು ಅಧ್ಯಾಯಗಳಲ್ಲಿ ಗೋಕಾಕ ಚಳವಳಿಯ ಆರಂಭದಿಂದ ತಮ್ಮ ಅಧ್ಯಯನದ ತುದಿಯವರೆಗಿನ ಕಾಲದ ಎಲ್ಲ ಕನ್ನಡದ ಬೆಳವಣಿಗೆಯನ್ನು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಕರ್ನಾಟಕದ ಕನ್ನಡ ಬೆಳವಣಿಗೆಯನ್ನು ತಿಳಿಯಲು ಈ ಅಧ್ಯಯನ ಸಹಕಾರಿಯಾಗಿರುತ್ತದೆ. ಕನ್ನಡ ನಾಡು ನುಡಿಯ ಜಾಗೃತಿಯ ಒಂದು ಭಾಗವಾಗಿ ಈ ಕೃತಿ ತನ್ನದೇ ಪ್ರಭಾವವನ್ನು ಬೀರುವಂಥದ್ದಾಗಿರುತ್ತದೆ. ಇದರಲ್ಲಿ ನಾಲ್ಕನೆಯ ಅಧ್ಯಾಯ ಪೂರ್ಣ ಗೋಕಾಕ ವರದಿಯನ್ನು ಕುರಿತುದಾಗಿದೆ. ಅದರ ಹಿಂದೆ ಮುಂದೆ ಶಿಕ್ಷಣ, ಅದರ ಮಾಧ್ಯಮ, ಮಾತೃಭಾಷೆ ಶಿಕ್ಷಣದ ಮಹತ್ವ ಮುಂತಾದವುಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ.
©2025 Book Brahma Private Limited.